
ಜೇವರಗಿ,ಮೇ ೧೩: ಥೈಲ್ಯಾಂಡನಿAದ ಬಂದ ಬುದ್ಧನ ಪಂಚಲೋಹದ ಮೂರ್ತಿಯ ಮೆರವಣಿಗೆ ಮೇ.೧೫ರಂದು ಪಟ್ಟಣದಲ್ಲಿ ಬೆಳಿಗ್ಗೆ ೧೧.೩೦ಕ್ಕೆ ನಡೆಯಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಮಹಾಸಭಾ ಜನರು ಭಾಗವಹಿಸಬೇಕು ಎಂದು ಬೌದ್ಧ ಮಹಾಸಭಾ ಅಧ್ಯಕ್ಷ ಮಲ್ಲಣ್ಣ ಕೊಡಚಿ, ಉಪಾಧ್ಯಕ್ಷ ರಾಜಶೇಖರ್ ಶಿಲ್ಪಿ ಕೋರಿದ್ದಾರೆ. ಬೀದರ ಜಿಲ್ಲೆ ಅಣದೂರು ವರಜ್ಯೋತಿ ಬಂತೆ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ನೆರವೆರಿಸುವರು. ಬಸವೇಶ್ವರ ಚೌಕದಿಂದ ಮೆರವಣಿಗೆ ನಡೆಯುತ್ತದೆ. ಭಾಗವಹಿಸುವವರು ಬಿಳಿ ಸಮವಸ್ತ್ರವನ್ನು ಧರಿಸಬೇಕು ಎಂದು ತಿಳಿಸಿದ್ದಾರೆ

























