Home ಜಿಲ್ಲೆ ಹಾಳಾದ ರಸ್ತೆ

ಹಾಳಾದ ರಸ್ತೆ

ಲಕ್ಷ್ಮೇಶ್ವರ,ಮೇ4: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕೊನೆಯ ಗ್ರಾಮವಾದ ಬಾಲೆ ಹೊಸೂರು ಮೂಲಭೂತವಾದ ರಸ್ತೆಯಿಂದ ವಂಚಿತವಾಗಿದ್ದು ಈ ರಸ್ತೆಗೆ ಹಿಡಿದಿರುವ ಗ್ರಹಣಕ್ಕೆ ಕೊನೆಯಿಲ್ಲವೇ ಎಂಬ ಪ್ರಶ್ನೆ ಈ ಗ್ರಾಮದ ಜನರನ್ನು ಕಾಡುತ್ತಿದೆ.


ಲೋಕೋಪಯೋಗಿ ಇಲಾಖೆಯ ಜಿಲ್ಲಾ ಮುಖ್ಯ ರಸ್ತೆಯಾದ ಬಾಲೆ ಹೊಸೂರು ಗ್ರಾಮದಿಂದ ಸೂರಣಗಿ ವರೆಗಿನ ರಸ್ತೆ ಬಹುತೇಕ ಸಂಪೂರ್ಣ ಹಾಳಾಗಿದ್ದು ಈ ರಸ್ತೆಯನ್ನು ಸುಧಾರಣೆ ಮಾಡುವಂತೆ 10 ವರ್ಷಗಳಿಂದ ನೂರಾರು ಅರ್ಜಿಗಳನ್ನು ಮನವಿಗಳನ್ನು ಸಂಬಂಧಿಸಿದ ಇಲಾಖೆಗೆ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು ಯಾರೊಬ್ಬರು ಈ ಗ್ರಾಮದ ರಸ್ತೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಪ್ರತಿನಿತ್ಯ ವ್ಯಾಪಾರ ವಹಿವಾಟು ಶಾಲಾ ಕಾಲೇಜು ಸೇರಿದಂತೆ ಎಲ್ಲ ಕೆಲಸ ಕಾರ್ಯಗಳಿಗೂ ಲಕ್ಷ್ಮೇಶ್ವರಕ್ಕೆ ಹೋಗಬೇಕಾಗಿದ್ದು ಆದರೆ ಈ ರಸ್ತೆಯ ಸ್ಥಿತಿ ಅಯೋಮಯವಾಗಿದೆ.

ಈ ಕುರಿತು ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕ ರಾಜು ಬೆಂಚಿಹಳ್ಳಿ ಪ್ರತಿಕ್ರಿಯೆ ನೀಡಿ ರಸ್ತೆ ಸಂಬಂಧಪಟ್ಟಂತೆ ಮನವಿ ಅರ್ಜಿಗಳನ್ನು ಕೊಟ್ಟು ಸಾಕಾಗಿ ಹೋಗಿದೆ ಸರ್ಕಾರ ರಸ್ತೆ ಮಾಡುವುದಿಲ್ಲ ಎಂದಾದರೆ ದಯಾಮರಣಕ್ಕಾದರೂ ಅನುಮತಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ತಾಳ್ಮೆಯನ್ನು ಪರೀಕ್ಷಿಸಬೇಡಿ ಮುಂದಾಗುವ ಯಾವುದೇ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.