Home ಕ್ರೈಂ ಸುದ್ದಿಗಳು ವಡಗಾಂವ (ದೇ) ಸಂಗಮೇಶ್ವರ ದೇವಾಲಯ ಹತ್ತಿರದ ಬಾವಿಯೊಳಗೆ ಮಗುವಿನ ಶವ ಪತ್ತೆ: ಕೊಲೆ ಮಾಡಿರುವ ಶಂಕೆ

ವಡಗಾಂವ (ದೇ) ಸಂಗಮೇಶ್ವರ ದೇವಾಲಯ ಹತ್ತಿರದ ಬಾವಿಯೊಳಗೆ ಮಗುವಿನ ಶವ ಪತ್ತೆ: ಕೊಲೆ ಮಾಡಿರುವ ಶಂಕೆ

ಔರಾದ್ : ತಾಲ್ಲೂಕಿನ ವಡಗಾಂವ (ದೆ ) ದಲ್ಲಿ ಎರಡು ತಿಂಗಳ ಗಂಡು ಮಗುವಿಗೆ ಬಾವಿಯಲ್ಲಿ ಬಿಸಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರಾಣಿ ಗಂಡ ಸಂಜಯ್ (29) ಅನ್ನುವವಳಿಗೆ ಎರಡು ವರ್ಷದ ಹಿಂದೆ ಮಹಾರಾಷ್ಟ್ರದ ಕವಳಗಡ ಗ್ರಾಮಕ್ಕೆ ಮದುವೆಯಾಗಿತ್ತು. ಪ್ರಥಮ ಹೆರಿಗೆಗೆ ತವರು ಮನೆ ವಡಗಾಂವ ಗ್ರಾಮಕ್ಕೆ ಬಂದು ಎರಡು ತಿಂಗಳ ಕೆಳಗೆ ಗಂಡು ಮಗುವಿಗೆ ಜನ್ಮ ನೀಡಿದಳು.

ನವಜಾತ ಶಿಶುವಿನ ತಂದೆ ಸಂಜು ವಿಠ್ಠಲ ರಾವ್ ಅವರು ಬಂದಾಗ ಮಗುವಿಗೆ ದೇವರು ಕೊಂಡೊಯ್ಯದಿದ್ದಾನೆ ಎಂದು ಪ್ರಚಾರ ಬಿಂಬಿಸುತ್ತಾರೆ ಅದನ್ನು ಅರಿತ ಮಗುವಿನ ತಂದೆ ನನ್ನ ಮಗುವಿಗೆ ನನ್ನ ಹೆಂಡತಿ, ಮಾವ, ಅತ್ತೆ, ಭಾವ ಒಟ್ಟು ನಾಲ್ಕು ಜನ ಸೇರಿ ಕೊಂಡು ಕೊಲೆ ಮಾಡಿ ಬಾವಿಗೆ ಹಾಕಿದ್ದಾರೆ ಇವರನ್ನು ತಕ್ಕ ಶಿಕ್ಷೆಗೆ ಒಳಪಡಿಸಬೇಕು ಎಂದು ಪೆÇಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ಆರೋಪಿತರನ್ನು ಪೆÇಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

ಕೊಲೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಭಾಲ್ಕಿ ವಿಭಾಗದ ಡಿವೈಎಸ್ಪಿ ಬಲ್ಲಪ್ಪ ನಂದಗಾವೆ, ಸಿಪಿಐ ರಘುವೀರಸಿಂಗ ಠಾಕೂರ್, ಪಿಎಸ್‍ಐ ದಿನೇಶ ಎಂ.ಟಿ ನೇತೃತ್ವ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದೆ. ಸಂತಪೂರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.