Home ಜಿಲ್ಲೆ ಹುಬ್ಬಳ್ಳಿ ರಕ್ತದಾನ ಶಿಬಿರ

ರಕ್ತದಾನ ಶಿಬಿರ


ನವಲಗುಂದ,ಏ.೨೩:
“ರಕ್ತದಾನ, ಮಹಾದಾನ” ಎಂಬ ನಾಣ್ಣುಡಿಯಂತೆ, ಸಮಾಜಕ್ಕೆ ಕೊಡುಗೆ ನೀಡಲು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನಕ್ಕೆ ಮುಂದಾಗಬೇಕು ಎಂದು ಹುಬ್ಬಳ್ಳಿಯ ರೋಟರಿ ಬ್ಲಡ್ ಬ್ಯಾಂಕ ನ ತಾಂತ್ರಿಕ ನಿರ್ದೇಶಕರಾದ ರಾಧಿಕಾ ಆಪ್ಟೆ ಹೇಳಿದರು.


ಅವರು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯ್ ಕ್ಯೂ ಎ ಸಿ, ಭಾರತೀಯ ರೆಡ ಕ್ರಾಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್ ಎಸ್ ಎಸ್ ಹಾಗೂ ಧಾರವಾಡದ ರೋಟರಿ ಬ್ಲಡ್ ಬ್ಯಾಂಕ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಒಬ್ಬ ವ್ಯಕ್ತಿಯು ತನ್ನ ರಕ್ತವನ್ನು ಸ್ವಯಂಪ್ರೇರಿತವಾಗಿ ನೀಡುವುದರ ಮೂಲಕ ತುರ್ತು ಪರಿಸ್ಥಿತಿಯಲ್ಲಿರುವ ಇನ್ನೊಬ್ಬರ ಜೀವವನ್ನು ಉಳಿಸಬಹುದು. ಇದು ಮಾನವೀಯತೆಯ ಸಂಕೇತ, ಆತ್ಮತೃಪ್ತಿಯನ್ನು ನೀಡುತ್ತದೆ, ಮತ್ತು ದಾನಿಯ ಆರೋಗ್ಯಕ್ಕೂ ಒಳ್ಳೆಯದು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ ಬಿ ಬಾಗಡಿ ಮಾತನಾಡಿ ಅರ್ಹತೆ ಇರುವ ಎಲ್ಲ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮುಖಾಂತರ ಆಪತ್ಕಾಲದಲ್ಲಿರುವ ರೋಗಿಗಳಿಗೆ ನೆರವಾಗಬೇಕು ಹಾಗೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.


ಸಿಪಿಐ ರವಿಕುಮಾರ ಕಪ್ಪತ್ತಣ್ಣವರ, ಪಿಎಸ್‌ಐ ಜನಾರ್ದನ್ ಭಟ್ರಳ್ಳಿ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ೪೦ ಯೂನಿಟ್ ರಕ್ತದಾನ ಮಾಡಿದರು.ಶ್ರೀಧರ ಕಲ್ಲೂರ ನಿರೂಪಣೆ, ಸವಿತಾ ಚಿಕ್ಕಣ್ಣವರ ಸ್ವಾಗತ, ಸಂತೋಷ ಹುಬ್ಬಳ್ಳಿ ವಂದನಾರ್ಪಣೆ ಮಾಡಿದರು.
ಗಣೇಶ್ ಧೋoಗಡಿ, ಗಂಗಾಧರ ಗೌಡರ, ಪ್ರಸನ್ನ ಪಂಢರಿ, ಶ್ರೀಧರ ಲೋನಕರ್, ರವಿ ಬ್ಯಾಹಟ್ಟಿ, ಮಧು ಹುಣಸಗಿ, ಸುಜಾತಾ ಬರದೂರ, ಪ್ರಹತ್ ತಂದೂರ್, ವಸಂತ ಮುಂದಿನಮನಿ, ಜ್ಯೋತಿಭಾ ದೊಡಮನಿ,ಭಾರತಿ ಭೋವಿ, ಸುರೇಶ ಬಾರಕೇರ ಹಲವರು ಇದ್ದರು.