Home ಜಿಲ್ಲೆ ಬೀದರ್ ಎಟಿಎಂ ದರೋಡೆ ಪ್ರಕರಣ: ಬಿಹಾರದಲ್ಲಿ ಆರೋಪಿಗಳ ಸೆರೆ : ಪಟಾಕಿ ಸಿಡಿಸಿ ಸಂಭ್ರಮ

ಬೀದರ್ ಎಟಿಎಂ ದರೋಡೆ ಪ್ರಕರಣ: ಬಿಹಾರದಲ್ಲಿ ಆರೋಪಿಗಳ ಸೆರೆ : ಪಟಾಕಿ ಸಿಡಿಸಿ ಸಂಭ್ರಮ

ಔರಾದ್ : ರಾಜ್ಯವನ್ನೆ ತಲ್ಲಣಗೊಳಿಸಿದ ಬೀದರ್‍ನಲ್ಲಿ ನಡೆದ ಎಟಿಎಂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಪೆÇಲೀಸ್ ತಂಡ ಆರೋಪಿಗಳನ್ನು ಬಿಹಾರದಲ್ಲಿ ಬಂಧಿಸಿರುವ ಹಿನ್ನೆಲೆಯಲ್ಲಿ ಔರಾದ್ ಪೆÇಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅವರು ಎಟಿಎಂ ದರೋಡೆ ಪ್ರಕರಣದ ಆರೋಪಿಗಳು ದೂರದ ಬಿಹಾರದಲ್ಲಿ ಪೆÇಲೀಸರ ಬಲೆಗೆ ಬಿದ್ದಿರುವುದು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಆರೋಪಿಗಳ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲ ಕಡೆಯಿಂದ ಪೆÇಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹಾಗೂ ಅವರ ತಂಡ ಕೈಗೊಂಡ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾದವು. ಈ ಕಾರ್ಯಚರಣೆಯಲ್ಲಿ ನಮ್ಮ ಪೆÇಲೀಸ್ ಠಾಣೆಯ ಪಿಎಸ್‍ಐ ವಾಸಿಮ್ ಪಟೇಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು ಆರೋಪಿಗಳ ಬಂಧನದಿಂದ ಎಟಿಎಂ ದರೋಡೆ ಪ್ರಕರಣದ ಹಿಂದಿರುವ ಜಾಲದ ಕುರಿತು ಮತ್ತಷ್ಟು ಮಾಹಿತಿ ಹೊರಬರುವ ನಿರೀಕ್ಷೆ ಮೂಡಿದೆ ಎಂದರು.

ಈ ಸಂದರ್ಭದಲ್ಲಿ ಎಎಸ್‍ಐ ಶಫಿ, ನರಸಾರೆಡ್ಡಿ, ಸಂಜುಕುಮಾರ, ಹರಿಶ್, ಜ್ಞಾನೇಶ್ವರ, ಯಾದವ ಪಾಂಡ್ರೆ, ಅರುಣ, ಶ್ರೀಕಾಂತ ರೆಡ್ಡಿ, ದಯಾನಂದ ಘುಳೆ, ಅನಿಲಕುಮಾರ ನಿರ್ಮಳೆ, ಸೇರಿದಂತೆ ಇನ್ನಿತರರಿದ್ದರು.