Home ಜಿಲ್ಲೆ ಕಲಬುರಗಿ ಭೋವಿ ನಿಗಮದ ಪ್ರಗತಿ ಪರಿಶೀಲನ ಸಭೆ : ಕಮಿಷನ್ ದಂಧೆಗೆ ಬ್ರೇಕ್,ಜು. 24ರೊಳಗೆ ಬಾಕಿ ಅರ್ಜಿಗಳ...

ಭೋವಿ ನಿಗಮದ ಪ್ರಗತಿ ಪರಿಶೀಲನ ಸಭೆ : ಕಮಿಷನ್ ದಂಧೆಗೆ ಬ್ರೇಕ್,ಜು. 24ರೊಳಗೆ ಬಾಕಿ ಅರ್ಜಿಗಳ ವಿಲೇವಾರಿಗೆ ಗಡುವು : ರಾಮಪ್ಪ ಎಂ

ಕಲಬುರಗಿ, ಜೂ.25: ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹಾಗೂ ಭ್ರμÁ್ಟಚಾರವನ್ನು ಸಂಪೂರ್ಣವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದ್ದು, ಕಮಿಷನ್ ದಂಧೆಗೆ ಕಡಿವಾಣ ಬಿದ್ದಿದೆ. ಯಾರೂ ಐದು ರೂಪಾಯಿ ಲಂಚವನ್ನೂ ನೀಡಬಾರದು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ ಹೇಳಿದರು.

ಬುಧುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ನಿಗಮದಿಂದ ಅನುμÁ್ಠನಗೊಳಿಸುತ್ತಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ, ಸಮುದಾಯ ಮುಖಂಡರುಗಳೊಂದಿಗೆ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮುದಾಯದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಈ ಸಭೆಗಳನ್ನು ನಡೆಸಲಾಗುತ್ತಿದ್ದು, ಚರ್ಚೆಯ ವೇಳೆ ಮುಖಂಡರು ಶಿಸ್ತು ಕಾಪಾಡಬೇಕು ಎಂದು ವಿನಂತಿಸಿದರು. ಅಲ್ಲದೆ, ಸಭೆಗೆ ಗೈರಾದ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕ್ರಮಕ್ಕೆ ಸೂಚಿಸಿದರು.

ಸಮುದಾಯದ ಬಡತನ ನಿರ್ಮೂಲನೆಗಾಗಿ ನಿಗಮವು ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಸಣ್ಣ ವ್ಯಾಪಾರಕ್ಕಾಗಿ 1 ಲಕ್ಷದ (₹50,000 ಸಾಲ ಹಾಗೂ ₹50,000 ಸಹಾಯಧನ) ಸ್ವಯಂ ಉದ್ಯೋಗ ನೇರ ಸಾಲ, ಹೊಸದಾಗಿ ಜಾರಿಗೆ ತರಲಾದ ಕುರಿ-ಮೇಕೆ ಸಾಕಾಣಿಕೆ ಯೋಜನೆ ಹಾಗೂ ಹೈನುಗಾರಿಕೆಗಾಗಿ 1.25 ಲಕ್ಷದವರೆಗೆ ಧನಸಹಾಯ ನೀಡಲಾಗುತ್ತಿದೆ. ಉದ್ಯಮ ಘಟಕಗಳ ಸ್ಥಾಪನೆಗೆ ಗರಿಷ್ಠ 4 ಲಕ್ಷ ಹಾಗೂ ವ್ಯಾಪಾರ ಉದ್ದೇಶಗಳಿಗೆ ಗರಿಷ್ಠ 2 ಲಕ್ಷದವರೆಗೆ ಶೇ. 70 ರಿಂದ 75 ರಷ್ಟು ಸಹಾಯಧನ ಸಿಗಲಿದೆ. ಸ್ವಾಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಗೆ ಗರಿಷ್ಠ 4 ಲಕ್ಷದವರೆಗೆ ನೆರವು ನೀಡಲಾಗುತ್ತಿದೆ ಎಂದರು.

ಮಹಿಳಾ ಸಬಲೀಕರಣಕ್ಕಾಗಿ ಪ್ರೇರಣಾ ಯೋಜನೆಯಡಿ ಸ್ವಸಹಾಯ ಸಂಘಗಳಿಗೆ 5 ಲಕ್ಷ ಆರ್ಥಿಕ ನೆರವು ಘೋಷಿಸಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಟ್ಟು 19 ಹೊಸ ಮಹಿಳಾ ಸಂಘಗಳ ನೋಂದಣಿಗೆ ಸೂಚಿಸಿದ್ದರು. ಇದರೊಂದಿಗೆ 3.75 ಲಕ್ಷ ವೆಚ್ಚದ ಗಂಗಾ ಕಲ್ಯಾಣ, ಭೂ ಒಡೆತನ ಯೋಜನೆಗಳು ಜಾರಿಯಲ್ಲಿವೆ.

ವಿವಿಧ ಕ್ಷೇತ್ರಗಳಲ್ಲಿ ಚಿತ್ತಾಪುರ ಮತಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಫಲಾನುಭವಿಗಳ ಆಯ್ಕೆ ಪಟ್ಟಿ ಅಂತಿಮಗೊಳ್ಳದೆ ಬಾಕಿ ಉಳಿದಿರುವುದಕ್ಕೆ ಹಾಗೂ ಮೂವರು ಟಿಡಿಒಗಳಿದ್ದರೂ ನಿರೀಕ್ಷಿತ ಪ್ರಗತಿ ಕಾಣದಿರುವುದಕ್ಕೆ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ನಿಗಮದ ಪ್ರಧಾನ ವ್ಯವಸ್ಥಾಪಕ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ನೆಪಗಳನ್ನು ಹೇಳುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರೂ.

ಭವಿಷ್ಯದಲ್ಲಿ ತಾಂತ್ರಿಕ ಕಾರಣಗಳಿಂದ ಅರ್ಜಿ ತಿರಸ್ಕøತಗೊಂಡರೆ ತಕ್ಷಣವೇ ಮುಂದಿನವರಿಗೆ ಸೌಲಭ್ಯ ನೀಡಲು ಅನುಕೂಲವಾಗುವಂತೆ ಪಟ್ಟಿಯಲ್ಲಿ ಹೆಚ್ಚುವರಿಯಾಗಿ 2-3 ಹೆಸರುಗಳನ್ನು ಸೇರಿಸಿಕೊಳ್ಳಲು ಕಿವಿಮಾತು ಹೇಳಿದರು.

ಬ್ಯಾಂಕ್‍ಗಳ ಅಸಹಕಾರ ಮತ್ತು ಕಟ್ಟುನಿಟ್ಟಿನ ಗಡುವು:
ಉದ್ಯಮಶೀಲತೆ ಮತ್ತು ಇತರೆ ಯೋಜನೆಗಳಡಿ ಆಯ್ಕೆಯಾದ ಬಡ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕ್‍ಗಳು ಅನಗತ್ಯವಾಗಿ ಸಿಬಿಲ್ ಸ್ಕೋರ್, ಶ್ಯೂರಿಟಿ ಹಾಗೂ ಗ್ಯಾರಂಟಿಗಳನ್ನು ಕೇಳಿ ಅಲೆದಾಡಿಸುತ್ತಿರುವ ಬಗ್ಗೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಡವರಿಗೆ ನೆರವು ನೀಡಲು ಸಿಬಿಲ್ ಅಥವಾ ಶ್ಯೂರಿಟಿ ಕೇಳಬಾರದು ಎಂಬ ಸರ್ಕಾರದ ಸ್ಪಷ್ಟ ಆದೇಶವಿದೆ ಎಂದು ನೆನಪಿಸಿದರೂ. ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸದ್ಯ ಬಾಕಿ ಇರುವ ಒಟ್ಟು 527 ಅರ್ಜಿಗಳನ್ನು ಬರುವ ಜುಲೈ 24ರ ಒಳಗಾಗಿ ಸಂಪೂರ್ಣವಾಗಿ ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಕಾಲಮಿತಿ ವಿಧಿಸಿದರು.

ಸಂವಾದದಲ್ಲಿ ಶ್ರೀ ಸಿದ್ದರಾಮೇಶ್ವರ ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಶರಣಪ್ಪ ಬೂದುಗುರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಕಚೇರಿಗಳಲ್ಲಿ ಸಿಸಿಟಿವಿ ಕಣ್ಗಾವಲು ಇಡಲಾಗಿದೆ ಎಂದರು. ಮುಖಂಡರಾದ ಮಲ್ಲಿಕಾರ್ಜುನ ಅವರು ಜೇವರ್ಗಿ ತಾಲೂಕಿನ ಅರಳಗುಂಡಗಿ, ನೆದಲಗಿ ಹಾಗೂ ಮಂದ್ಯಾವಲ ಗ್ರಾಮಗಳಲ್ಲಿ ಕಳೆದ ಐದು ವರ್ಷಗಳಿಂದ ಭೂ ಒಡೆತನ ಯೋಜನೆಯಡಿ ಭೂ ಮಂಜೂರಾತಿ ನೆನೆಗುದಿಗೆ ಬಿದ್ದಿರುವುದನ್ನು ತರಾಟೆಗೆ ತೆಗೆದುಕೊಂಡರು.

ಬೋವಿ ವಡ್ಡರ್ ಸಮಾಜದ ಕಮಲಾಪುರ ತಾಲೂಕು ಅಧ್ಯಕ್ಷ ಗೋವಿದ ವಡ್ಡರ್ ಮಾತನಾಡಿ, ದಾಖಲೆಗಳ ಮೇನೋ ನೀಡಿ ಮೂರು ತಿಂಗಳು ಕಳೆದರೂ ಜಿಲ್ಲಾ ವ್ಯವಸ್ಥಾಪಕರು ಮತ್ತು ಫೀಲ್ಡ್ ಆಫೀಸರ್ ಅವರು ಫೆÇೀನ್ ಕರೆ ಸ್ವೀಕರಿಸುತ್ತಿಲ್ಲ ಎಂದು ದೂರಿದರು.

ಅಂಬಲಗಾ ಗ್ರಾಮದ ಫಲಾನುಭವಿ ಬಾಲಪ್ಪ ಭೀಮಶಾ ಅವರು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆದು ಎರಡು ಮೂರು ವರ್ಷ ಕಳೆದರೂ ಇನ್ನೂ ಮೋಟಾರ್ ಪಂಪ್ ವಿತರಿಸಿಲ್ಲ ಎಂದು ಅಳಲು ತೋಡಿಕೊಂಡರು. ಬೋರ್‍ವೆಲ್ ಕೊರೆದ 30 ದಿನಗಳ ಒಳಗಾಗಿ ಮೋಟಾರ್ ಪಂಪ್ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಗುತ್ತಿಗೆದಾರರಿಗೆ ಆದೇಶಿಸಿದರು.

ಚಿಂಚೋಳಿ ಭಾಗದ ಮುಖಂಡ ಹಣಮಂತ ಬೋವಿ ಅವರು ಕಲ್ಲು ಗಣಿಗಾರಿಕೆಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿ ಮುಂಬೈ, ಹೈದರಾಬಾದ್‍ಗೆ ವಲಸೆ ಹೋಗುತ್ತಿರುವ ಬಡ ಕುಟುಂಬಗಳ ರಕ್ಷಣೆಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಹೇಳಿದರು.

ವೇದಿಕೆ ಮೇಲೆ. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಪ್ರಧಾನ ವ್ಯವಸ್ಥಾಪಕ ಶಿವಸ್ವಾಮಿ.  ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ   ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಕರ್ನಾಟಕ ಭೋಮಿ ಅಭಿವೃದ್ಧಿ ನಿಲ್ಲಾ ವ್ಯವಸ್ಥಾಪಕ ಮರಲಿಂಗ್ ಹೊನ್ನೆಗುಂಟಿಕರ್, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಮಾಜ ಮುಖಂಡರ ಅಧ್ಯಕ್ಷರು ಸಂಘ ಸಂಸ್ಥೆಯಗಳು ಭಾಗವಹಸಿದ್ದರು.