Home ಮುಖಪುಟ ಸುದ್ದಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಮತ್ತೆ ಏರಿಕೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಮತ್ತೆ ಏರಿಕೆ

ಬೆಂಗಳೂರು,ಜು.೨೩:ಬೆಂಗಳೂರು-ಮೈಸೂರು ಸಂಚಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೊಮ್ಮೆ ದರ ಏರಿಕೆಯ ಶಾಕ್ ನೀಡಿದೆ. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಟೋಲ್ ದರವನ್ನು ಪರಿಷ್ಕರಿಸಲಾಗಿದ್ದು, ನೂತನ ದರಗಳು ಜುಲೈ ೨೧ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.

ಕಳೆದ ಮೂರು ವರ್ಷಗಳಲ್ಲಿ ಎಕ್ಸ್‌ಪ್ರೆಸ್‌ವೇ ಟೋಲ್ ದರ ಶೇಕಡಾ ೩೭ ರಷ್ಟು ಹೆಚ್ಚಳ ಕಂಡಂತಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ಕಣಿಮಿಣಿಕೆ ಹಾಗೂ ಬೆಂಗಳೂರು ದಕ್ಷಿಣ (ಹಳೆಯ ರಾಮನಗರ) ವ್ಯಾಪ್ತಿಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಈ ಹೊಸ ದರಗಳು ಅನ್ವಯವಾಗಲಿವೆ.

ಹೊಸ ಟೋಲ್ ದರಗಳ ವಿವರ (ಒಂದು ಕಡೆಯ ಸಂಚಾರಕ್ಕೆ):ಕಾರು, ಜೀಪ್, ವ್ಯಾನ್ (ಐಒಗಿ): ೧೮೫ (ಹಳೆಯ ದರ: ೧೮೦), ಲಘು ವಾಣಿಜ್ಯ ವಾಹನ / ಮಿನಿ ಬಸ್: ೨೯೫ ,ಎರಡು ಆಕ್ಸಲ್ ಟ್ರಕ್ / ಬಸ್: ೬೨೦ ,ಮೂರು ಆಕ್ಸಲ್ ವಾಣಿಜ್ಯ ವಾಹನ: ೬೭೫, ಭಾರಿ ಯಂತ್ರೋಪಕರಣ / ಬಹು-ಆಕ್ಸಲ್ ವಾಹನ (೪ ರಿಂದ ೬ ಆಕ್ಸಲ್):೯೭೦ ಬೃಹತ್ ವಾಹನಗಳು (೭ ಅಥವಾ ಹೆಚ್ಚು ಆಕ್ಸಲ್): ೧,೧೮೦ ,

ಪಾಸ್ ಮತ್ತು ರಿಯಾಯಿತಿ ಮಾಹಿತಿ:ಒಂದೇ ದಿನದ ರಿಟರ್ನ್ ಜರ್ನಿ: ೨೭೫ ,ಮಾಸಿಕ ಪಾಸ್ (೫೦ ಪ್ರಯಾಣಗಳು): ೬,೧೦೦ (೧೬೦ ಏರಿಕೆ) ಟೋಲ್ ಪ್ಲಾಜಾದಿಂದ ೨೦ ಕಿ.ಮೀ ವ್ಯಾಪ್ತಿಯಲ್ಲಿರುವ ಸ್ಥಳೀಯ ನಿವಾಸಿಗಳ ಮಾಸಿಕ ಪಾಸ್ ದರದಲ್ಲಿ ಯಾವುದೇ ಬದಲಾವಣೆಯಿಲ್ಲ
೨೦೨೩ರ ಜನವರಿಯಲ್ಲಿ ಹೊರಡಿಸಲಾದ ಟೋಲ್ ಗ್ಯಾಜೆಟ್ ಅಧಿಸೂಚನೆ ಹಾಗೂ ಜುಲೈ ೧೮ರಂದು ದೊರೆತ ಆಡಳಿತಾತ್ಮಕ ಅನುಮೋದನೆಯನ್ವಯ ೨೦೨೬-೨೭ನೇ ಹಣಕಾಸು ವರ್ಷದ ಪರಿಷ್ಕರಣೆಯಾಗಿ ಈ ದರ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.