Home ಜಿಲ್ಲೆ ಕಲಬುರಗಿ ತೊಗರಿ ಮತ್ತು ಉದ್ದು ಮಿನಿಕಿಟ್ ಬೀಜಗಳ ವಿತರಣೆಗೆ ಬಸವರಾಜ ರೇವಗೊಂಡ ಚಾಲನೆ

ತೊಗರಿ ಮತ್ತು ಉದ್ದು ಮಿನಿಕಿಟ್ ಬೀಜಗಳ ವಿತರಣೆಗೆ ಬಸವರಾಜ ರೇವಗೊಂಡ ಚಾಲನೆ

ಸೇಡಂ, ಜೂ,18:ದ್ವಿದಳ ಧಾನ್ಯಗಳ ಆತ್ಮನಿರ್ಭರ ಪಲ್ಸ್ ಅಭಿಯಾನ ಯೋಜನೆಯಡಿ ತಾಲೂಕಿನ ಹಾಬಾಳ ಟಿ ಮತ್ತು ಸಂಗಾವಿ ಟಿ ಗ್ರಾಮಗಳಿಂದು ರೈತರಿಗೆ ಉಚಿತವಾಗಿ ತೊಗರಿ ಮತ್ತು ಉದ್ದು ಮಿನಿಕಿಟ್ ಬೀಜಗಳನ್ನು ಕೃಷಿಕ ಸಮಾಜದ ಅಧ್ಯಕ್ಷರಾದ ಬಸವರಾಜ ರೇವಗೊಂಡ, ಸಹಾಯಕ ಕೃಷಿ ಇಲಾಖೆಯ ನಿರ್ದೇಶಕರಾದ ವಿಶಾಲ ಕುಮಾರ್ ಜಂಟಿಯಾಗಿ ವಿತರಿಸಿ ಮಾತನಾಡಿದರು. ಸಹಾಯಕ ಕೃಷಿ ಇಲಾಖೆಯ ನಿರ್ದೇಶಕರಾದ ವಿಶಾಲ ಕುಮಾರ ಮಾತನಾಡಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿ, ಸ್ವಾವಲಂಬನೆ (ಆತ್ಮನಿರ್ಭರತೆ) ಸಾಧಿಸುವ ಉದ್ದೇಶದಿಂದ ಕೃಷಿ ಇಲಾಖೆಯು ಈ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರೈತರಿಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಉತ್ತಮ ಗುಣಮಟ್ಟದ ತೊಗರಿ ಹಾಗೂ ಉದ್ದು ಬಿತ್ತನೆ ಬೀಜಗಳ ಮಿನಿಕಿಟ್‍ಗಳನ್ನು ನೀಡಲಾಗುತ್ತದೆ ಪ್ರಾತ್ಯಕ್ಷಿಕೆ ಬಿತ್ತನೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲೂ ರೈತರ ಜಮೀನಿನಲ್ಲಿ ಹೊಸ ತಂತ್ರಜ್ಞಾನದ ಪ್ರಾಯೋಗಿಕ ಬಿತ್ತನೆಗಾಗಿ ಉಚಿತ ಬೀಜ ವಿತರಿಸಲಾಗುತ್ತದೆ. ಉತ್ಪಾದನೆಗೆ ಉತ್ತೇಜನದಿಂದ ಮಳೆಯ ವ್ಯತ್ಯಾಸದಿಂದ ಇಳುವರಿ ಕುಂಠಿತವಾಗುವುದನ್ನು ತಪ್ಪಿಸಲು ಮತ್ತು ಇಳುವರಿ ಹೆಚ್ಚಿಸಲು ಸುಧಾರಿತ ತಳಿಗಳ ಬೀಜಗಳನ್ನು ಒದಗಿಸಲಾಗುತ್ತಿದೆ ಎಂದರು. ಈ ವೇಳೆಯಲ್ಲಿ ಬಸವರಾಜ್ ಕೊಡಸಾ, ಮುಖಂಡರಾದ ಸತೀಶ ಪೂಜಾರಿ, ಶಿವಕುಮಾರ್ ದೇಶಮುಖ್, ಇಕ್ಬಾಲ್ ಪಟೇಲ್, ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, ಪ್ರಗತಿ ಪರ ರೈತರು ಇದ್ದರು.

ಬಿಜೋಪಚಾರ, ತಳಿಗಳ ಆಯ್ಕೆ, ಹವಾಮಾನ ಆಧಾರಿತ ಬಿತ್ತನೆ ಕ್ರಮ, ಮಂಗನ ಬಾಲ ಕಳೆ ನಿರ್ವಹಣೆ, ತೊಗರಿಯಲ್ಲಿ ನಟೆ ರೋಗ ಮತ್ತು ಗೋಡ್ಡೂ ರೋಗ ನಿರ್ವಹಣೆ ಕುರಿತು ರೈತರಿಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ಕೊಡಸಾ ಮಾಹಿತಿ ನೀಡಿದರು.