Home ಜಿಲ್ಲೆ ೪೭ ವರ್ಷಗಳ ಸಿಕ್ಯಾಬ್ ಸೇವೆಗೆ ‘ಬಸವ ಪುರಸ್ಕಾರ’

೪೭ ವರ್ಷಗಳ ಸಿಕ್ಯಾಬ್ ಸೇವೆಗೆ ‘ಬಸವ ಪುರಸ್ಕಾರ’

ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೩: ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ೪೭ ವರ್ಷಗಳಿಂದ ಸಲ್ಲಿಸುತ್ತಿರುವ ಸುದೀರ್ಘ ಸೇವೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ ಅವರಿಗೆ ಬೆಂಗಳೂರಿನ ಬಸವ ಪರಿಷತ್ ವತಿಯಿಂದ ‘ಬಸವ ಪುರಸ್ಕಾರ-೨೦೨೬’ ನೀಡಿ ಗೌರವಿಸಲಾಯಿತು.
ಬಸವ ಪುರಸ್ಕಾರ-೨೦೨೬ರ ಅಂಗವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಿಕ್ಯಾಬ್ ಸಂಸ್ಥೆಯ ಮೂಲಕ ಸಲ್ಲಿಸಿರುವ ದೀರ್ಘಕಾಲದ ಸೇವೆ, ಶೈಕ್ಷಣಿಕ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಕಾರ್ಯ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಪರಿಗಣಿಸಿ ಎ.ಎಸ್. ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಎ.ಎಸ್. ಪಾಟೀಲ, “ನನಗೆ ದೊರೆತಿರುವ ಈ ಪುರಸ್ಕಾರವನ್ನು ವೈಯಕ್ತಿಕ ಗೌರವವೆಂದು ಪರಿಗಣಿಸುವುದಿಲ್ಲ. ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ. ಡಾ. ಎಸ್.ಎ. ಪುಣೇಕರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಬಿತ್ತಿದ ಸೇವಾ ಆಶಯದ ಫಲವೇ ಈ ಗೌರವ. ಹೀಗಾಗಿ ಈ ಪುರಸ್ಕಾರವನ್ನು ಅವರ ಸ್ಮರಣೆಗೆ ಹಾಗೂ ಸೇವಾ ಪರಂಪರೆಗೆ ಅರ್ಪಿಸುತ್ತೇನೆ” ಎಂದರು.
ಸಿಕ್ಯಾಬ್ ಸಂಸ್ಥೆಯಲ್ಲಿ ೪೭ ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ತಮ್ಮ ಪಾಲಿಗೆ ದೊಡ್ಡ ಜವಾಬ್ದಾರಿ ಹಾಗೂ ಗೌರವವಾಗಿದೆ. ಸಂಸ್ಥಾಪಕ ದಿ. ಡಾ. ಎಸ್.ಎ. ಪುಣೇಕರ್ ಅವರ ಶೈಕ್ಷಣಿಕ ದೃಷ್ಟಿಕೋನ ಮತ್ತು ಸಮಾಜಮುಖಿ ಆಶಯಗಳನ್ನು ಮುಂದುವರಿಸಿಕೊAಡು ಹೋಗುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಹೇಳಿದರು.
ಸಿಕ್ಯಾಬ್ ಶಿಕ್ಷಣ ಸಂಸ್ಥೆಯು ಹಲವು ವರ್ಷಗಳಿಂದ ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣ ಮತ್ತು ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ತನ್ನದೇ ಆದ ಸೇವಾ ಪರಂಪರೆಯನ್ನು ಬೆಳೆಸಿಕೊಂಡಿದೆ.
ಸAಸ್ಥೆಯ ಅಧ್ಯಕ್ಷ ಸಲಾವುದ್ದಿನ್ ಪುಣೇಕರ್ ಮಾತನಾಡಿ, “ನಮ್ಮ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ ಅವರಿಗೆ ಬಸವ ಪುರಸ್ಕಾರ ದೊರೆತಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ. ಅವರ ಸುದೀರ್ಘ ಸೇವೆಯನ್ನು ಗುರುತಿಸಿ ನೀಡಿರುವ ಈ ಗೌರವಕ್ಕೆ ಆಡಳಿತ ಮಂಡಳಿಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಇರ್ಷಾದ ಪುಣೇಕರ್, ಎನ್.ಎಸ್. ಭೂಸನೂರ, ಡಾ. ಎಚ್.ಕೆ. ಯಡಹಳ್ಳಿ, ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಿಗಾರ, ಮಹೆಬೂಬ ಪುಣೇಕರ್ ಸೇರಿದಂತೆ ಸಂಸ್ಥೆಯ ವಿಭಾಗದ ಮುಖ್ಯಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.