Home ಜಿಲ್ಲೆ ಬೆಂಗಳೂರು ಸಮಾನತೆ,ಸಹೋದರತೆ ತತ್ವ ಅಳಡಿಸಿಕೊಳ್ಳಲು ಬಿ.ಕೆ.ರವಿ ಕರೆ

ಸಮಾನತೆ,ಸಹೋದರತೆ ತತ್ವ ಅಳಡಿಸಿಕೊಳ್ಳಲು ಬಿ.ಕೆ.ರವಿ ಕರೆ

ಕೋಲಾರ,ಆ,೧೭- ಸಮಾನತೆ, ಸಹೋದರತೆ ಹಾಗೂ ಸಹಬಾಳ್ವೆ ತತ್ವಗಳನ್ನು ಅಳವಡಿಸಿಕೊಂಡು ದೇಶವನ್ನು ಒಗ್ಗೂಡಿಸಲು ಪ್ರತಿಯೊಬ್ಬ ಭಾರತೀಯರು ಶ್ರಮಿಸಬೇಕೆಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಕರೆ ನೀಡಿದರು.


ನಗರ ಹೊರವಲಯದ ಟಮಕದ ವಿವಿಯ ಆಡಳಿತ ಕಚೇರಿ ಆವರಣದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.


ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ಬಂದಿರುವ ಸ್ವಾತಂತ್ರ್ಯವನ್ನು ಇತ್ತೀಚಿನ ದಿನಗಳಲ್ಲಿ ಜಾತಿ, ಮತ, ಧರ್ಮ, ಭಾಷೆ, ಗಡಿ ನೆಪದಲ್ಲಿ ಹಾಳು ಮಾಡುವವರ ಮಧ್ಯೆ, ಭಾರತೀಯರು ನಾವೆಲ್ಲರೂ ಒಂದೇ ಎಂಬ ಸಂದೇಶಕ್ಕೆ ಚ್ಯುತಿ ಬಾರದಂತೆ ಬದುಕುವುದು ದೇಶವಾಸಿಗಳೆಲ್ಲರ ಕರ್ತವ್ಯವಾಗಿದೆಯೆಂದರು.


ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅತ್ಯುತ್ತಮ ಸಂವಿಧಾನ ನೀಡಿದ್ದಾರೆ, ಸಮಾನತೆಯ ಪರಿಕಲ್ಪನೆ ಕೊಟ್ಟಿದ್ದು, ಅದರಡಿ ನಾವು ಮುನ್ನಡೆಯೋಣ ಎಂದು ಕಿವಿಮಾತು ಹೇಳಿದ ಅವರು, ನೀಡಿರುವ ಸ್ವಾತಂತ್ರ್ಯದಿಂದ ಇಂದು ನಾವು ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ನಿವೃತ್ತ ವಿತ್ತಾಧಿಕಾರಿ ವಸಂತಕುಮಾರ್ ಸೇರಿದಂತೆ ವಿವಿಯ ಅಧಿಕಾರಿಗಳು,ಸಿಬ್ಬಂದಿ ಹಾಜರಿದ್ದರು.