Home ಜಿಲ್ಲೆ ನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಅಥಣಿ ಪೊಲೀಸರ ಕಾರ್ಯಾಚರಣೆ

ನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಅಥಣಿ ಪೊಲೀಸರ ಕಾರ್ಯಾಚರಣೆ

ಅಥಣಿ: ಆ.8:ತಾಲೂಕಿನ ವಿವಿಧ ಭಾಗಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಿರುವ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೆÇಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೆಲ ಮೋಟಾರ್ ಸೈಕಲ್ ಸವಾರರು ತಮ್ಮ ವಾಹನಗಳ ನಂಬರ್ ಪ್ಲೇಟ್‍ಗಳನ್ನು ತೆಗೆದು ಸಂಚರಿಸುತ್ತಿರುವುದು ಕಂಡುಬಂದಿದೆ.

ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೊಳಿ ಅವರ ನಿರ್ದೇಶನದಂತೆ, ನಂಬರ್ ಪ್ಲೇಟ್ ಇಲ್ಲದೆ ರಸ್ತೆಗಿಳಿದ ಮೋಟಾರ್ ಸೈಕಲ್‍ಗಳನ್ನು ಪೆÇಲೀಸರು ತಡೆದು, ವಾಹನಗಳಿಗೆ ಕಡ್ಡಾಯವಾಗಿ ನಂಬರ್ ಪ್ಲೇಟ್ ಅಳವಡಿಸಿದ ಬಳಿಕವೇ ಬಿಡುಗಡೆ ಮಾಡಿದರು. ಇದೇ ವೇಳೆ ಕಳುವಾಗಿದ್ದ ಹಾಗೂ ಕಳೆದುಹೋಗಿದ್ದ ಹಲವು ಬೆಲೆಬಾಳುವ ಮೊಬೈಲ್ ಫೆÇೀನ್‍ಗಳನ್ನು ಸಿಇಐಆರ್ ಪೆÇೀರ್ಟಲ್ ಮೂಲಕ ಪತ್ತೆಹಚ್ಚಿ ಸುಮಾರು 50 ಮೊಬೈಲಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಶಾಂತ ಮುನ್ನೊಳಿ ಅವರು ವಾಹನ ಸವಾರರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಿ ಮಾತನಾಡಿ “ಎಐ ಕ್ಯಾಮೆರಾಗಳ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಬಹುದು. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು” ಎಂದು ಎಚ್ಚರಿಕೆ ನೀಡಿದ ಅವರು ನಾಲ್ಕು ಚಕ್ರದ ವಾಹನ ಸವಾರರು ಸೀಟ್‍ಬೆಲ್ಟ್ ಧರಿಸುವುದು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಬಳಸುವುದು, ವಾಹನದ ಆರ್‍ಸಿ, ಚಾಲನಾ ಪರವಾನಗಿ (ಲೈಸೆನ್ಸ್), ವಿಮೆ (ಇನ್ಸೂರೆನ್ಸ್) ದಾಖಲಾತಿಗಳನ್ನು ಹೊಂದಿರುವುದು ಹಾಗೂ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಿರಬೇಕು ಎಂದು ಸೂಚಿಸಿದರು.

ಈ ವೇಳೆ ಮೊಬೈಲ್ ಕಳೆದುಕೊಂಡು ಮರಳಿ ಪಡೆದ ನ್ಯಾಯವಾದಿ ಸನದಿ ಮಾತನಾಡಿ ಅಥಣಿ ಪೆÇಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರ ಪರವಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳುವಾದ ಹಾಗೂ ಕಳೆದುಹೋದ ಮೊಬೈಲ್‍ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಿಂತಿರುಗಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಪೆÇಲೀಸ್ ಇಲಾಖೆಯ ಈ ಸೇವೆಗೆ ಅಭಿನಂದನೆ ಸಲ್ಲಿಸುತ್ತೇನೆ. ಸಾರ್ವಜನಿಕರು ಪೆÇಲೀಸ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಈ ವೇಳೆ ಸಿಪಿಐ ಸಂತೋಷ ಹಳ್ಳೂರ. ಪಿಎಸ್‍ಐ ಗಿರಿಮಲ್ಲಪ್ಪ ಉಪ್ಪಾರ.ಕಾಗವಾಡ ಪಿಎಸ್‍ಐ ರಾಘವೇಂದ್ರ ಖೋತ. ಪಿಎಸ್‍ಐ ಕ್ರೈಂ ಮಲ್ಲಿಕಾರ್ಜುನ ತಳವಾರ. ಹೆಚ್ಚುವರಿ ಪಿಎಸ್‍ಐ ನಿಖೀಲ್ ಕಾಂಬಳೆ. ಪೆÇ್ರಬೇಷನರಿ ಪಿಎಸ್‍ಐಗಳಾದ ಪ್ರಶಾಂತ ಬಾಗೇವಾಡಿ. ಆರತಿ ತೇಲಿ. ಹರೀಶ್ ಪಿ.ಕೆ. ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.