
ಸರ್ಕಾರದಿಂದ ಅಧಿಕೃತ ಅದೇಶ: ಜ. ಒಂದರಿಂದ ಜಾರಿ, ಹೋರಾಟಕ್ಕೆ ಸಂದ ಜಯ
ಬೆಂಗಳೂರು, ನ.೨೯- ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ೧೩ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಆಸಾ ಕಾರ್ಯರ್ತೆಯರು ಸರಣಿಯನ್ನು ವಾಪಸ್ ಪಡೆದಿದ್ದಾರೆ.
೨೦೦೦ ರೂಪಾಯಿ ಹೆಚ್ಚಳ ಮಾಡಿರುವ ಬಗ್ಗೆ ಹಾಗೂ ಆಶಾ ಕಾರ್ಯಕರ್ತರಿಗೆ ಗುಂಪು ಚಟುಟಿಕೆಗೆ ಒಂದು ಸಾವಿರ ರೂಪಾಯಿ ಬಗ್ಗೆ ಮುಖ್ಯಮಂತ್ರಿ ಕಚೇರಿ ಹಾಗೂ ಆರೋಗ್ಯ ಸಚಿವ ಯಟಿ ಖಾದರ್ ಅವರಿಂದ ಲಿಖಿತ ಆದೇಶ ಬಂದ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆದಿರುವುದಾಗಿ ಒಕ್ಕೂಟದ ಕಾರ್ಯದರ್ಶಿ ನಾಗಲಕ್ಷ್ಮಿ ಘೋಷಿಸೊದರು.
ನಿನ್ನೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಆಶಾಕಾರ್ಯಕರ್ತೆಯರ ನಿಯೋಗದ ಜೊತೆ ಮಾತುಕತೆ ನಡೆಸಿ ೨೦೦೦ ರೂ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೂ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಹೋರಾಟ ಮುಂದುವರೆಸಿ ಲಿಖಿತ ಆದೇಶಕ್ಕೆ ಪಟ್ಟು ಹಿಡಿದಿದ್ದರು.
ಇಂದು ಮುಖ್ಯಮಂತ್ರಿ ಕಚೇರಿಯಿಂದ ೨೦೨೭ರ ಜನವರಿ ೧ರಿಂದ ಮಾಸಿಕ ಗೌರವಧನವನ್ನು ೨,೦೦೦ ರೂ. ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಇಂದು ಅಧಿಕೃತವಾಗಿ ಲಿಖಿತ ಆದೇಶ ಹೊರಡಿಸಿದೆ. ನಿನ್ನೆ ನಡೆದ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗಿನ ಚರ್ಚೆ ಬಳಿಕದ ತೀರ್ಮಾನಗಳನ್ನು ಟಿಪ್ಪಣಿ ರೂಪದಲ್ಲಿ ಸಿಎಂ ಕಚೇರಿ ಹೊರಡಿಸಿದೆ.
ಅಲ್ಲದೆ, ಆಶಾ ಕಾರ್ಯಕರ್ತೆಯರಿಗೆ ಗುಂಪು ಚಡುವಟಿಕೆ ಒಂದು ಸಾವಿರ ರೂ ನೀಡುವ ಬಗ್ಗೆಯೂ ಲಿಖಿತ ಆದೇಶ ಹೊರಡಿಸಬೇಕೆಂಬ ಪಟ್ಡುಹಿಡಿದಿದ್ದರು. ಇದು ನಗರ ಪ್ರದೇಶದ ಆಶೆಯರಿಗೆ ಮಾತ್ರ ನೀಡಲಾಗುತ್ತಿದೆ. ಈ ಹಣವನ್ನು ರಾಜ್ಯದ ೪೦,೦೦೦ ಆಶಾ ಕಾರ್ಯಕರ್ತೆಯರಿಗೂ ನೀಡಬೇಕೆಂದು ಆಗ್ರಹಿಸಿದ್ದರು.
ಹೋರಾಟಕ್ಕೆ ಮಣಿದಿರುವ ಸರ್ಕಾರ ಎಲ್ಲ ಆಶಾ ಕಾರ್ಯಕರ್ತೆಯರಿಗೂ ಅನ್ವಯವಾಗುವಂತೆ ಒಂದು ಸಾವಿರ ರೂ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಲಖಿತ ಉತ್ತರ ನೀಡಿದ್ದಾರೆ. ಒಟ್ಟು ೩೦೦೦ ರೂ ಹೆಚ್ಚಳವಾಗಿರುವ ಬಗ್ಗೆ ಸರ್ಕಾರದಿಂದ ಲಿಖಿತ ಆದೇಶ ಬಂದ ನಿನ್ನೆ ಆಶಾ ಕಾರ್ಯಕರ್ತೆಯರು ೧೩ ದಿನಗಳಿಂದ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಅಹೋರಾತ್ರಿ ನಡೆಸುತ್ತಿದ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಾಗಲಕ್ಕ್ಮಿ, ಸರ್ಕಾರದಿಂದ ಲಿಖಿತ ಉತ್ತರ ಬಂದಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ಬಗ್ಗೆ ಸರ್ಕಾರ ಅಧಿಕಾರಿಗಳು ತಮ್ಮ ಜೊತೆ ನಿರಂತರ ಮಾತುಕತೆ ನಡೆಸಿದ ಬಳಿಕ ಲಿಖಿತ ಅದೇಶ ಜಾರಿಯಾಗಿದೆ ಎಂದರು.
ಸರ್ಕಾರ ಅಧಿಕೃತ ಆದೇಶದ ಪ್ರಕಾರ ಮುಂದಿನ ವರ್ಷದಿಂದ ಆಶಾ ಕಾರ್ಯಕರ್ತೆಯರು ೧೧,೫೦೦ ಸಾವಿರ ರೂ.ಗಳಿಂದ ೧೨,೦೦೦ ಪಡೆಯಲಿದ್ದಾರೆ ಎಂದು ಹೇಳಿದರು.




















