ಬಾದಾಮಿ,ಆ.೩೦: ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೫ ನೇ ಆರಾಧನಾ ಮಹೋತ್ಸವದ ನಿಮಿತ್ಯ ಶನಿವಾರ ಪೂರ್ವಾರಾಧನೆಯಂದು ನಗರದಲ್ಲಿ ಪಾಲಕಿ ಉತ್ಸವ ಜರುಗಿತು.
ಪಾಲಕಿಯಲ್ಲಿ ಶ್ರೀ ರಾಯರ ಭಾವಚಿತ್ರದೊಂದಿಗೆ ವಿವಿಧ ಸಂಗೀತ ವಾದ್ಯ ಮತ್ತು ಭಜನಾ ಪದಗಳ ಮೂಲಕ ಶ್ರೀ ಮಠದಿಂದ ಹೊರಟು ಪ್ರಮುಖ ಬೀದಿಗಳ ಮೂಲಕ ಭಕ್ತರ ಮನೆಗಳಿಗೆ ತೆರಳಿ ಶ್ರೀ ಮಠಕ್ಕೆ ಬಂದು ತಲುಪಿತು. ಈ ಸಂದರ್ಭದಲ್ಲಿ ಭಕ್ತರು ಆರತಿ ಮಾಡಿ ಭಕ್ತಿ ಭಾವದಿಂದ ನಮಿಸಿದರು.
ರಾಯರ ವೃಂದಾವನಕ್ಕೆ ಪು?Á್ಪಲಂಕಾರ ,ಮತ್ತು ಶ್ರೀ ಮಠಕ್ಕೆ ತಳಿರು ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿ?ೆÃಕ ಅ?ÉÆ್ಟÃತ್ತರ, ವೃಂದಾವನಕ್ಕೆ ಅಲಂಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಮಧ್ಯಾಹ್ನದ ಹೊತ್ತಿಗೆ ನೈವೇದ್ಯ, ಮಹಾ ಮಂಗಳಾರತಿ, ಅಲಂಕಾರ ಸೇವೆ ಹಾಗೂ ತೀರ್ಥ ಪ್ರಸಾದ ಜರುಗಿತು.
ಅಧ್ಯಕ್ಷ ಕೃ?À್ಣ ಕೆರೂರ, ಕಾರ್ಯದರ್ಶಿ ಅಡಿವೇಂದ್ರ ಇನಾಮದಾರ, ಎಸ್.ಜಿ.ಕುಲಕರ್ಣಿ, ವಿಜಯೀಂದ್ರ ಇನಾಮದಾರ, ಪಿ.ಪಿ.ಕಾರಕೂನ, ಜಯತೀರ್ಥ ಇನಾಮದಾರ, ಗುರಾಚಾರ್ಯ ಪುರೋಹಿತ, ವಿ?ÀÄ್ಣ ಗುಡಿ, ಪ್ರಸನ್ನ ಮುಗಳಿ, ಶ್ರೀಹರಿ , ಪವಮಾನ, ಹನಮಂತ ಕೆರೂರ,ಗುರುರಾಜ, ಮನೋಹರ, ವಾದಿರಾಜ, ಲಕ್ಷ್ಮೀಕಾಂತ, ಬದರೀಶ, ಭಗೀನಿಯರಾದ ವೀಣಾ ಕೆರೂರ, ಪರಿಮಳ ಇನಾಮದಾರ, ರೇವತಿ, ಸವಿತಾ, ಜಾನಕಿ, ವೈ?À್ಣವಿ , ವಂದನಾ, ಶುಭಾ ಮಾಹುಲಿ, ಥಿಟೆ ಇತರರು ಸೇರಿದಂತೆ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.

































