
ಕಲಬುರಗಿ,ಜೂ.18: ನಗರದಲ್ಲಿ ಎಲೆಕ್ಟ್ರಿಕ್ ಆಟೋಗಳ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ
ಕಲ್ಯಾಣ ಕರ್ನಾಟಕ ಅಟೋ ಚಾಲಕರ ಸಂಘವು ಉಪ ಸಾರಿಗೆ ಆಯುಕ್ತರಿಗೆ ಮನವಿ ಮಾಡಿದೆ.
ಕಲಬುರಗಿ ನಗರದಲ್ಲಿ ಕೇವಲ ಎಲೆಕ್ಟ್ರಿಕ್ ಆಟೋಗಳಿಗೆ ಮಾತ್ರ ರಹದಾರಿ ನೀಡಿ ನೋಂದಣಿ ಮಾಡುತ್ತಿದ್ದಾರೆ .ಈಗಾಗಲೇ 1993 ರಲ್ಲಿ ಕಲಬುರಗಿ ನಗರದಲ್ಲಿ, ಆಟೋಗಳಿಗೆ ರಹದಾರಿ ನೀಡುವದನ್ನು ನಿಲ್ಲಿಸಿದ್ದಾರೆ. ಇದಾದ ನಂತರ, ಕಲಬುರಗಿ ನಗರದಲ್ಲಿ ವಿವಿಧ ಸರಕಾರಿ ಯೋಜನೆಯಡಿಯಲ್ಲಿ ರಹದಾರಿ ನೀಡಿರುತ್ತಾರೆ. ಕಲಬುರಗಿ ನಗರ ವ್ಯಾಪ್ತಿ, ಕೇವಲ 16ಕಿಮೀ ಆಗಿರುವದರಿಂದ ನಗರದಲ್ಲಿ ಎಲ್‍ಪಿಜಿ ,ಸಿಎನ್‍ಜಿ
ಪರವಾನಿಗೆ ಪಡೆದ ಸುಮಾರು 8000 ಸಾವಿರ ಆಟೋಗಳಿವೆ. 2000 ಸಾವಿರ ಎಲೆಕ್ಟ್ರಿಕ್ ಆಟೋಗಳಿರಬಹುದು. ಎಲ್‍ಪಿಜಿ ,ಸಿಎನ್‍ಜಿ ಹಾಗೂ ಎಲೆಕ್ಟ್ರಿಕ್ ಆಟೋಗಳಿಗೆ ನೀಡುವ ರಹದಾರಿಗೆ ಟಮ್ರ್ಸ್ ಮತ್ತು ಕಂಡೀಶನ್ ಒಂದೇ ಆಗಿರುವದರಿಂದ ಕೇವಲ ಎಲೆಕ್ಟ್ರಿಕ್ ಆಟೋಗಳಿಗೆ ಮಾತ್ರ ರಹದಾರಿ ನೀಡುವದರಿಂದ ಉಳಿದ ಚಾಲಕರಿಗೆ ಅನ್ಯಾಯವಾಗುತ್ತದೆ. ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಆಟೋ ಚಾಲಕರ ನಡುª ಹೆಚ್ಚಿನ ಪೈಪೆÇೀಟಿ ಏರ್ಪಡುತ್ತಿದೆ. ಜನರು ಈಗಾಗಲೇ ಕಲಬುರಗಿ ನಗರಕ್ಕೆ, ನೂತನವಾಗಿ ಬರುವ ಅಧಿಕಾರಿಗಳಿಗೆ ಆಟೋಚಾಲಕರಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಕೇವಲ ಎಲೆಕ್ಟ್ರಿಕ್‍ಆಟೋಗಳೊಗೆ ನೀಡುತ್ತಿರುವ ಪರವಾನಿಗೆ ತಾತ್ಕಾಲಿಕ ತಡೆ ಹಿಡಿದು ಈಗಾಗಲೇ ಪರವಾನಿಗೆ ಪಡೆದ ಆಟೋ ಚಾಲಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು.ಈಗಾಗಲೇ ಸರಕಾರದ 1-07-2025 ಅಧಿಸೂಚನೆಯ ಪ್ರಕಾರ ನೋಂದಣಿಯಾಗಿರುವ ಹಾಗೂ ನೋಂದಣಿಯಾಗುವ ಎಲೆಕ್ಟ್ರಿಕ್ ಆಟೋಗಳಿಗೆ ಕಡ್ಡಾಯವಾಗಿ ಪರವಾನಿಗೆ ನೀಡಬೇಕೆಂದು ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಮಾಲಿ ಪಾಟೀಲ,ಶರಣು, ಚೇತನ,ರಾಜು,ಮಂಜುನಾಥ,ಸುರೇಶ,ಮಲ್ಲಿಕಾರ್ಜುನ ಇದ್ದರು.


























