Home ಜಿಲ್ಲೆ ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹ : ಬಸವರಾಜ ಜಾಬಶೆಟ್ಟಿ

ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹ : ಬಸವರಾಜ ಜಾಬಶೆಟ್ಟಿ

ಬೀದರ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕರ್ನಾಟಕ ಪದವಿ ಕಾಲೇಜು, ನಿರಂತರವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಜೊತೆಗೆ ಅನ್ನದಾಸೊಹ ಮಾಡುತ್ತಾ ಸಂಸ್ಥೆಯು ಹಾಗೂ ಶಿಕ್ಷಕರು ಸುಮಾರು 20 ವರ್ಷಗಳಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುತ್ತಾ ಬರುತ್ತಿದೆ ಎಂದು ಕ.ರಾ.ಶಿ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜ ಜಾಬಶೆಟ್ಟಿ ತಿಳಿಸಿದರು. ನಗರದ ಕರ್ನಾಟಕ ಪದವಿ ಕಾಲೇಜಿನಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಸಭೆಯಲ್ಲಿ ವಿದ್ಯಾರ್ಥಿಗಳು, ಪಾಲಕರ-ಶಿಕ್ಷಕರ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಯವುದೇ ವಿದ್ಯಾರ್ಥಿಯು ಆರ್ಥಿಕ ಸಂಕಷ್ಠ ಮತ್ತು ಶಿಕ್ಷಣದಿಂದ ವಂಚಿತರಾಗಬರದೆಂದು ತಿಳಿಸಿದರು. “ಶ್ರೀಮಂತಿಕೆ ಶಾಶ್ವತವಾದುದಲ್ಲ. ಶ್ರೀಮಂತರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಸೇವೆ ಮಾಡಲು ಮುಂದಾಗಬೇಕು” ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಉಪನ್ಯಾಸಕರು ಮತ್ತು ಆಡಳಿತ ಮಂಡಳಿ ಸದಸ್ಯರು ಪ್ರತಿವರ್ಷವೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ನಿರಂತರವಾಗಿ ಸೇವೆ ಮಾಡುತ್ತಿದ್ದಾg. “ಬಡತನವೆಂಬುದು ಶಾಪವಲ್ಲ; ಅದರಿಂದ ಹೊರಬರದೇ ಹೋದರೆ ಅದು ನಿಜವಾದ ಶಾಪವಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ವಿದ್ಯಾರ್ಥಿಗಳ ವಿನಂತಿಗಳ ಆಧಾರದ ಮೇಲೆ ಕಾಲೇಜು ಶುಲ್ಕಗಳು ಉಚಿತ ಕಂಪ್ಯೂಟರ್ ತರಬೇತಿ, ಹಸಿದ ವಿದ್ಯಾರ್ಥಿಗಳಿಗೆ ಅನ್ನಪೂರ್ಣ ಯೋಜನೆಯಡಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬಡತನದಿಂದ ವಿದ್ಯಾರ್ಥಿಗಳ ಶಿಕ್ಷಣ ಹಿಂದುಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ಬಡತನದಿಂದ ಯಾವುದೇ ವಿದ್ಯಾರ್ಥಿಯು ನೀವು ಹಿಂದೆ ಸರಿಯಬೇಡಿ, ನಾವು ನಿಮ್ಮ ಜೊತೆ ಇದ್ದೇವೆ” ಎಂದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥರ್ಯ ತುಂಬಿದರು. ವಿದ್ಯಾರ್ಥಿಗಳ ಅನಿಸಿಕೆಗಳನ್ನು ಆಲಿಸಿ ಮತ್ತು ವಿದ್ಯಾರ್ಥಿಗಳ ನೋವುಗಳನ್ನು ಅರಿತುಕೊಂಡು ಅವಕಾಶದ ಕೊರತೆಯಿದೆ ಅನೇಕ ಬಡ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯಯಿಂದ ಶಿಕ್ಷಣವನ್ನು ಪುರೈಸಲು ಕಷ್ಟಕರವಾಗಿದೆ ಅಂತಹ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಸದಾ ಸಹಾಯ ಮಾಡಲಿದೆ ಯಾರು ಸಹ ಆರ್ಥಿಕ ಪರಿಸ್ಥಿತಿ ಆಧಾರದ ಮೇಲೆ ಶಿಕ್ಷಣದಿಂದ ದೂರ ವಿರಬಾರದೆಂದು ಕರೆ ನೀಡಿದರು. ಕ.ರಾ.ಶಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಾನ್ಯ ಶ್ರೀ ಸತೀಶ ಪಾಟೀಲ ಮಾತನಾಡಿ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಆಲಿಸಿದ ನಂತರ ವಿದ್ಯಾರ್ಥಿಗಳ ನೋವುಗಳನ್ನು ಅರಿತುಕೊಂಡು ಇದನ್ನ ಮನಗೊಂಡು ಕೂಡ ಪ್ರತಿ ವರ್ಷಕ್ಕೆ 21 ಸಾವಿರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ನಿಧಿಗೆ ನೀಡುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯರು ಸ್ವಾಗತ ಕೋರಿದರು. ಪಿ.ಎಸ್.ಎ.ಎಫ್ ಸಂಯೋಜನಾಧಿಕಾರಿ ಡಾ.ಸೋಮನಾಥ ಮುದ್ದಾರವರು 2025-26ನೇ ಸಾಲಿನ ವಾರ್ಷಿಕ ವರದಿ ಸಭೆಯಲ್ಲಿ ಮಂಡಿಸಿದರು. ಸುಮಾರು 257 ವಿದ್ಯಾರ್ಥಿಗಳು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ನಿಧಿಯಿಂದ ಅನೇಕ ಸೌಲಭ್ಯಗಳನ್ನು ಪಡೆದುಕೊಂಡರು. ಅದರ ಒಟ್ಟು ವೆಚ್ಚ ರೂ.3,09,655/-ಪಿ.ಎಸ್.ಎ.ಎಫ್ ಭರಿಸಿರುತ್ತಾರೆ ಎಂದು ತಿಳಿಸಿದರು.
ಕ.ರಾ.ಶಿ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಗಾದಗೆ ಅವರು ಕೂಡ ಪ್ರತಿ ವರ್ಷ 17 ಸಾವಿರ ರೂಪಾಯಿಗಳು ಈ ನಿಧಿಗೆ ನೀಡಿರುತ್ತಾರೆ. ಪ್ರಾಚಾರ್ಯರು ಶ್ರೀ ಸೋಮನಾಥ ಬಿರಾದರ, ಉಪನ್ಯಾಸಕರಾದ ಶ್ರೀ ಶ್ರೀಕಾಂತ ದೊಡ್ಡಮನಿ, ಡಾ. ಮಾದಯ್ಯ ಸ್ವಾಮಿ, ಡಾ. ಶಶಿಧರ ಪಾಟೀಲ, ಡಾ ರಾಣಿಬಾಯಿ ಪಾಟೀಲ, ಡಾ.ದಿಲೀಪ ಮಾಲೆ, ಡಾ.ಜೀವನಕುಮಾರ, ಡಾ.ಸವೀತಾ ಸುಮಾರು 100 ರಿಂದ 150 ಪೋಷಕರು ಹಾಗೂ ಸುಮಾರು 170 ವಿದ್ಯಾರ್ಥಿಗಳು ಭಾಗವಹಿಸಿದರು. ಶ್ರೀ ಜಗನ್ನಾಥ ಕಮಲಾಪುರೆ ವಂದನಾರ್ಪಣೆ ಮಾಡಿದರು.