Home ಜಿಲ್ಲೆ ಕಲಬುರಗಿ ಕರ್ನಾಟಕದಲ್ಲಿ 5,000 ಕೋಟಿ ರೂ. ಜಿಸಿಸಿ ಹೂಡಿಕೆಗೆ ಒಡಂಬಡಿಕೆ

ಕರ್ನಾಟಕದಲ್ಲಿ 5,000 ಕೋಟಿ ರೂ. ಜಿಸಿಸಿ ಹೂಡಿಕೆಗೆ ಒಡಂಬಡಿಕೆ

ಕಲಬುರಗಿ: ಜಾಗತಿಕ ಮಟ್ಟದಲ್ಲಿ ಕರ್ನಾಟಕದ ತಂತ್ರಜ್ಞಾನ ನಾಯಕತ್ವವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಪ್ರಮುಖ ಟೆಕ್ ಇಕೋಸಿಸ್ಟಮ್ ಸಂಸ್ಥೆಯಾದ ಗುಡ್ ವಕ್ರ್ಸ್ ಗ್ರೂಪ್ ನಡುವೆ ಬೃಹತ್ ಪಾಲುದಾರಿಕೆ ಒಪ್ಪಂದ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಮೂಲಕ ರಾಜ್ಯಕ್ಕೆ ಕನಿಷ್ಠ 5000 ಕೋಟಿ ರೂಪಾಯಿಗಳ ಹೊಸ ಹೂಡಿಕೆಯನ್ನು ಆಕರ್ಷಿಸುವ ಹಾಗೂ 50 ಹೊಸ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‍ಗಳನ್ನು (ಜಿಸಿಸಿ) ಸ್ಥಾಪಿಸುವ ಬೃಹತ್ ಗುರಿ ಹೊಂದಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಸಂಸ್ಥೆಗಳು ತಮ್ಮ ಪ್ರಮುಖ ಆಫೀಸ್ ಹಾಗೂ ಜಾಗತಿಕ ಸಾಮಥ್ರ್ಯ ಕೇಂದ್ರಗಳನ್ನು (ಜಿಸಿಸಿ) ಕರ್ನಾಟಕದಲ್ಲಿ ಸ್ಥಾಪಿಸಲು ಮತ್ತು ವಿಸ್ತರಿಸಲು ಈ ಸಹಭಾಗಿತ್ವವು ಉತ್ತೇಜನ ನೀಡಲಿದೆ. ಈ ಪಾಲುದಾರಿಕೆಯ ಮೂಲಕ ಹೂಡಿಕೆ ಪ್ರಚಾರ, ವಿದೇಶಿ ಸಂಪರ್ಕ ಸರ್ಕಾರಿ ನೀತಿಗಳ ಬೆಂಬಲ, ಶೈಕ್ಷಣಿಕ ಹಾಗೂ ಉದ್ಯಮ ಮಟ್ಟದ ಕಾರ್ಯತಂತ್ರಗಳ ಮೂಲಕ ರಾಜ್ಯದ ಒಟ್ಟಾರೆ ಟೆಕ್ ವಾತಾವರಣವನ್ನು ಬಲಪಡಿಸಲಾಗುವುದು. ಹೊಸ ಉದ್ಯೋಗಾವಕಾಶಗಳು, ಕೌಶಲ್ಯ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಸಂಶೋಧನೆಗೆ ವಿಶೇಷ ಒತ್ತು ನೀಡಲಾಗುವುದು.
ಈ ಸಹಯೋಗದ ಭಾಗವಾಗಿ, ಗುಡ್ ವಕ್ರ್ಸ್ ಗ್ರೂಪ್ ಮತ್ತು ಸಾನ್ನಿಸೋವಿ ಜಿಸಿಸಿ ಸಂಸ್ಥೆಗಳು ಕೆಡಿಇಎಂ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಲಿವೆ. ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವುದು, ವಲಯ ಆಧಾರಿತ ದುಂಡುಮೇಜಿನ ಸಭೆಗಳನ್ನು ಆಯೋಜಿಸುವುದು, ಉದ್ಯಮ ಸಂಶೋಧನೆ ಮತ್ತು ಜಿಸಿಸಿ ವರದಿಗಳನ್ನು ಸಿದ್ಧಪಡಿಸುವುದು, ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮ ರಂಗದ ನಡುವಿನ ಸಹಭಾಗಿತ್ವವನ್ನು ಬಲಪಡಿಸುವುದು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕರ್ನಾಟಕವನ್ನು ಪ್ರಚುರಪಡಿಸುವ ಕಾರ್ಯಗಳನ್ನು ಕೈಗೊಳ್ಳಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಿಇಒ ಸಂಜೀವ್ ಗುಪ್ತಾ ಅವರು, ತನ್ನ ಶಕ್ತಿಯುತ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಪ್ರಗತಿಪರ ನೀತಿಗಳು ಮತ್ತು ಉದ್ಯಮ ರಂಗದೊಂದಿಗಿನ ಸಹಯೋಗದ ವಿಧಾನದಿಂದಾಗಿ ಕರ್ನಾಟಕವು ಭಾರತದ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ ಇಕೋಸಿಸ್ಟಮ್ ನಲ್ಲಿ ತನ್ನ ನಾಯಕತ್ವವನ್ನು ಕಾಯ್ದುಕೊಂಡಿದೆ ಎಂದು ಹೇಳಿದರು.