Home ಜಿಲ್ಲೆ ಅಂಬಿಗರ ಚೌಡಯ್ಯನವರ ತತ್ವ-ಆದರ್ಶ ಪಾಲನೆ ಅಗತ್ಯ:ಉಮೇಶ ಮುದ್ನಾಳ್

ಅಂಬಿಗರ ಚೌಡಯ್ಯನವರ ತತ್ವ-ಆದರ್ಶ ಪಾಲನೆ ಅಗತ್ಯ:ಉಮೇಶ ಮುದ್ನಾಳ್

ಸೈದಾಪುರ:ನಿಜಶರಣ ಅಂಬಿಗರ ಚೌಡಯ್ಯನವರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದ ಶರಣರಲ್ಲ. ಅವರ ವಚನಗಳು, ಸಾಮಾಜಿಕ ಚಿಂತನೆಗಳು ಹಾಗೂ ತತ್ವ-ಆದರ್ಶಗಳು ಇಡೀ ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಅವರ ವಿಚಾರಧಾರೆಗಳನ್ನು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಹೇಳಿದರು.
ಸಮೀಪದ ಬಾಡಿಯಾಲ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಶ್ರಾವಣ ಮಾಸವು ಧಾರ್ಮಿಕವಾಗಿ ಪವಿತ್ರ ಹಾಗೂ ಶ್ರೇಷ್ಠವಾದ ಮಾಸವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಾಡಿಯಾಲ ಗ್ರಾಮದಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶರಣರ ತತ್ವ-ಆದರ್ಶಗಳನ್ನು ಜನರಿಗೆ ತಲುಪಿಸುವುದು ಹಾಗೂ ಯುವ ಪೀಳಿಗೆಗೆ ನಮ್ಮ ಶರಣ ಪರಂಪರೆಯ ಮಹತ್ವವನ್ನು ಪರಿಚಯಿಸುವುದು ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ವನಾಥ್ ಗಂಟಿ, ತಿಪ್ಪಣ್ಣ ಗಡದ್, ಮಲ್ಲೇಶಿ, ಜಗದೀಶ, ಮಲ್ಲಪ್ಪ, ಗೋವಿಂದ ತಿಮೋಜಿ, ಸೂಗರಪ್ಪ ಬೋಯಿನ್, ಚಂದ್ರು ಮರಿಯಪ್ಪ, ಮತ್ತಲ್ ಗಣಪುರ, ಶಿವು ಬೋಯಿನ್, ಬಸವರಾಜ ಕವಲಿ, ಬಸವರಾಜ ಕೊತ್ತಪಲ್ಲಿ, ಭೀಮು ತಿಮೋಜಿ, ಚನ್ನು ಕವಳೂರು, ನಿಂಗಪ್ಪ ಕಡೆಚೂರು, ದೇವಪ್ಪ ಗಟ್ಟಿಗೂರ್, ಯಂಕಪ್ಪ ಚಂದಾಪುರ, ರಾಮಣ್ಣ ಅಂಗಡಿ, ಮಲ್ಲು ಕವಳೂರು, ಬನ್ನಪ್ಪ ತಿಮೋಜಿ, ಕರಿಯಪ್ಪ ಗಂಟಿ, ಮಹದೇವ ಗಾಡದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.