Home ಜಿಲ್ಲೆ ವ್ಯಸನ ಚಿಕಿತ್ಸಾ ಕೇಂದ್ರ ಆರಂಭ

ವ್ಯಸನ ಚಿಕಿತ್ಸಾ ಕೇಂದ್ರ ಆರಂಭ

ಹುಬ್ಬಳ್ಳಿ,ಆ೫: ಇಲ್ಲಿನ ವಿವೇಕಾನಂದ ಜನರಲ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಪರಿವರ್ತನ ಎಂಬ ವ್ಯಸನ ಚಿಕಿತ್ಸೆ ಹಾಗೂ ಚೇತರಿಕೆ ಕೇಂದ್ರವನ್ನು ತೆರೆಯಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಅಧಿಕಾರಿ ಮಂಜುಳಾ ಹುಗ್ಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ವಿವಿಧ ವ್ಯಸನಗಳಿಗೆ ಅಂಟಿಕೊAಡು ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ವ್ಯಸನಕ್ಕೆ ಸರಿಯಾದ ಚಿಕಿತ್ಸೆ ಎಲ್ಲಿ ದೊರೆಯುತ್ತದೆ ಎಂಬ ಮಾಹಿತಿ ಇಲ್ಲದಿರುವುದು ಮತ್ತು ವ್ಯಸನದ ಬಗ್ಗೆ ಸಮಾಜದಲ್ಲಿನ ತಪುö್ಪ ಕಲ್ಪನೆ ಮತ್ತು ಕಳಂಕದಿAದಲೂ ಹಲವರು ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ಈ ಹಿನ್ನೆಲೆಯಲ್ಲಿ ವ್ಯಸನಕ್ಕೆ ಬಲಿಯಾದ ವ್ಯಕ್ತಿಗಳಿಗೆ ಸುರಕ್ಷಿತ, ಗೌರವಯುತ ಹಾಗೂ ಸಹಾನುಭೂತಿ ವಾತಾವರಣದಲ್ಲಿ ತಜ್ಞರ ನೇತೃತ್ವದಲ್ಲಿ ಚಿಕಿತ್ಸೆ ನೀಡಲು ಪರಿವರ್ತನ ವ್ಯಸನ ಚಿಕಿತ್ಸೆ ಮತ್ತು ಚೇತರಿಕೆ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.

ಇಲ್ಲಿ ಮದ್ಯ, ತಂಬಾಕು ವ್ಯಸನ, ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಸೇವೆನೆ, ಇಂಟರ್ನೆಟ್, ಮೊಬೈಲ್ ವ್ಯಸನ, ಗೇಮಿಂಗ್ ವ್ಯಸನ, ಜೂಜಾಟದ ವ್ಯಸನ ಹೀಗೆ ದೀರ್ಘಕಾಲದ ವ್ಯಸನಕ್ಕೆ ಅಂಟಿಕೊAಡಿರುವ ವ್ಯಕ್ತಿಗಳಿಗೆ ಕಡಿಮೆ ಚಿಕಿತ್ಸಾ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದಲ್ಲದೇ ಖಿನ್ನತೆ ಮತ್ತು ಆತಂಕ, ಒತ್ತಡ ನಿರ್ವಹಣೆ, ಒಸಿಡಿ, ತಲೆನೋವು, ಲೈಂಗಿಕ ಸಮಸ್ಯೆ, ದೀರ್ಘಕಾಲದ ನೋವು, ದಾಂಪತ್ಯ ಕಲಹ, ನಿದ್ರಾ ಅಸ್ವಸ್ಥತೆ, ಮನೋಭಾವದ ಅಸ್ವಸ್ಥತೆಗೆ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದೀಪಕ್ ಷಾ, ತಜ್ಞರಾದ ಡಾ. ಸುಧೀಂದ್ರ ಹುದ್ದಾರ್ ಇದ್ದರು.