Home ಜಿಲ್ಲೆ ಕಾಂಗ್ರೆಸ್ ಹೈಕಮಾಂಡ್ ಕ್ರಮ ಖಂಡನೀಯ: ಮಾರಸಂದ್ರ ಮುನಿಯಪ್ಪ

ಕಾಂಗ್ರೆಸ್ ಹೈಕಮಾಂಡ್ ಕ್ರಮ ಖಂಡನೀಯ: ಮಾರಸಂದ್ರ ಮುನಿಯಪ್ಪ

ಬೆಂಗಳೂರ, ಜೂ೨: ಸಾಮಾಜಿಕ ನ್ಯಾಯದ ಪರವಾಗಿದ್ದ, ಹಿಂದುಳಿದ ವರ್ಗದ ಪ್ರಭಲ ನಾಯಕರಾದ ಸಿದ್ಧರಾಮಯ್ಯರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ, ಒಬ್ಬ ಬಂಡವಾಳ ಶಾಹಿ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿ ಎಸ್‌ಸಿ/ಎಸ್‌ಟಿ ವರ್ಗಕ್ಕೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಹೈಕಮಾಂಡ್‌ಅನ್ನು ಆಲ್ ಇಂಡಿಯಾ ಬಿಎಸ್‌ಪಿ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದ್ದಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ ಬಂದು ೭೯ ವರ್ಷ ಕಳೆದಿದ್ದು, ಈ ದೇಶದಲ್ಲಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯಗಳು ಈ ದೇಶದ ಚುಕ್ಕಾಣಿಯನ್ನು ಹಿಡಿಯಬೇಕೆಂಬುದು ಡಾ. ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನದ ಆಶಯವಾಗಿದೆ. ಆದರೆ ಕರ್ನಾಟಕದಲ್ಲಿ ಇದೂವರೆಗೂ ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿಲ್ಲ. ಶೇ. ೧೧ ರಷ್ಟು ಇರುವ ಲಿಂಗಾಯಿತರು ೧೪ ಬಾರಿ ಮುಖ್ಯಮಂತ್ರಿ, ೧ ಬಾರಿ ಉಪರಾಷ್ಟçಪತಿ. ಶೇ. ೧೦ ರಷ್ಟು ಇರುವ ಒಕ್ಕಲಿಗರು ೮ ಬಾರಿ ಮುಖ್ಯಮಂತ್ರಿ ೧ ಬಾರಿ ಪ್ರಧಾನ ಮಂತ್ರಿ, ಶೇ. ೩೫ ರಷ್ಟು ಇರುವ ಹಿಂದುಳಿದವರು ೬ ಬಾರಿ ಮುಖ್ಯಮಂತ್ರಿ, ಶೇ. ೧ ರಷ್ಟು ಇರುವ ಬ್ರಾಹ್ಮಣರು ೩ ಬಾರಿ ಮುಖ್ಯಮಂತ್ರಿ ಮತ್ತು ಕೇವಲ ೫೦ ಸಾವಿರ ಮತಗಳು ಇರದ ರಜಪೂತ ಸಮುದಾಯದವರು ೧ ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ರಾಜ್ಯದಲ್ಲಿ ಸುಮಾರು ೨ ಕೋಟಿಗೂ ಹೆಚ್ಚಿರುವ ದಲಿತ ಸಮುದಾಯಗಳಲ್ಲಿ ಮಾತ್ರ ಯಾರನ್ನೂ ಮುಖ್ಯಮಂತ್ರಿ ಮಾಡಿರುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಬಸವಲಿಂಗಪ್ಪ. ಎನ್.ರಾಚಯ್ಯ, ಕೆ.ಹೆಚ್.ರಂಗನಾಥ್, ಎಲ್.ಜಿ.ಹಾವನೂರು, ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್‌ರವರಿಗೆ ಮುಖ್ಯಮಂತ್ರಿ ಮಾಡದೆ ಮೋಸ ಮಾಡಿರುತ್ತಾರೆ. ೨೦೧೩ ರಲ್ಲಿ ಡಾ.ಜಿ.ಪರಮೇಶ್ವರ್‌ರವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಇವರ ನಾಯಕತ್ವದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಿರುತ್ತದೆ. ಆದರೆ ಪರಮೇಶ್ವರ್‌ರವರನ್ನು ಮುಖ್ಯಮಂತ್ರಿ ಮಾಡಿರುವುದಿಲ್ಲ. ೨೦೨೩ ರಲ್ಲಿ ಡಿ.ಕೆ.ಶಿವಕುಮಾರ್‌ರವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಇವರ ನಾಯಕತ್ವದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಿದೆ ಎಂದು ಇವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಹಾಗಾದರೆ ಮೇಲ್ಜಾತಿ ಸಮುದಾಯಕ್ಕೆ ಡಿ.ಕೆ.ಶಿವಕುಮಾರ್‌ರವರಿಗೆ ಒಂದು ನ್ಯಾಯ ಮತ್ತು ಕೆಳಜಾತಿಗೆ ಸೇರಿದ ಡಾ.ಜಿ.ಪರಮೇಶ್ವರ್‌ರವರಿಗೆ ಒಂದು ನ್ಯಾಯವೇ? ಎಂದು ಅವರು ಪ್ರಶ್ನಿಸಿದ್ದಾರೆ.

೨೦೨೩ ರಲ್ಲಿ ಶೇ. ೯೦ ರಷ್ಟು ಪರಿಶಿಷ್ಟ ಜಾತಿ/ವರ್ಗದವರ ಮತಗಳು, ಮುಸ್ಲಿಂ ಸಮುದಾಯದ ಸಂಪೂರ್ಣ ಮತಗಳು ಕಾಂಗ್ರೇಸ್‌ಗೆ ಬಿದ್ದಿದ್ದು, ಒಕ್ಕಲಿಗ ಮತ್ತು ಲಿಂಗಾಯಿತ ಮತಗಳು ವಿಂಗಡಣೆಯಾಗಿರುತ್ತವೆ. ಹೀಗೆ ಶೇ. ೯೦ ರಷ್ಟು ಪರಿಶಿಷ್ಟರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದು ಕಾಂಗ್ರೇಸ್ ಪಕ್ಷ ದಲಿತರನ್ನು ಮುಖ್ಯಮಂತ್ರಿ ಮಾಡಿರುವುದಿಲ್ಲ. ಅಲ್ಲದೆ ಹಿಂದುಳಿದ ವರ್ಗದ ಪ್ರಭಲ ನಾಯಕ, ಸಾಮಾಜಿಕ ನ್ಯಾಯದ ಪರವಾಗಿರುವ ಸಿದ್ಧರಾಮಯ್ಯನವರನ್ನು ದೆಹಲಿಗೆ ಕರೆಸಿಕೊಂಡು ಅವರಿಂದ ರಾಜೀನಾಮೆ ಕೊಡಿಸಿ. ಒಬ್ಬ ಬಂಡವಾಳ ಶಾಹಿ ಡಿ.ಕೆ.ಶಿವಕುಮಾರ್‌ರವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೇಸ್ ಹೈಕಮಾಂಡ್ ಸೂಚಿಸಿದೆ. ಅಹಿಂದ ಹೆಸರಿನಲ್ಲಿ ಓಟು ಪಡೆದಿರುವ ಕಾಂಗ್ರೇಸ್ ಪಕ್ಷ ಸಿದ್ಧರಾಮಯ್ಯನವರ ರಾಜಿನಾಮೆ ಪಡೆದ ತಕ್ಷಣ ಪರಿಶಿಷ್ಟ ಜಾತಿ/ವರ್ಗದವರಲ್ಲಿ ಯಾರನ್ನಾದರೂ ಒಬ್ಬರನ್ನು ಮುಖ್ಯಮಂತ್ರಿ ಮಾಡದೆ ಘನಘೋರ ಅನ್ಯಾಯ ಮಾಡಿರುವುದನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಎಲ್ಲಾ ಶಾಸಕರು ಮತ್ತು ಮಂತ್ರಿಗಳು, ಎಂ.ಎಲ್.ಸಿ.ಗಳು, ಎಂ.ಪಿಗಳು ಡಾ. ಅಂಬೇಡ್ಕರ್‌ರವರು ಹೇಳಿರುವಂತೆ ಸ್ವಾಭಿಮಾನ ಇಲ್ಲದ ಕಡೆ ಇರಬಾರದೆಂಬ ಆಶಯದಂತೆ ಕಾಂಗ್ರೇಸ್ ಪಕ್ಷವನ್ನು ಬಿಟ್ಟು ಹೊರಬಂದು ಕರ್ನಾಟಕದಲ್ಲಿ ಜೆಡಿಎಸ್. ಉತ್ತರ ಪ್ರದೇಶದಲ್ಲಿ ಕಾನ್ಶೀರಾಮ್‌ಜೀಯವರು ಅಂಬೇಡ್ಕರ್‌ರವರು ಹೇಳಿದಂತೆ ತಮ್ಮದೇ ಸ್ವಂತ ಪಕ್ಷವನ್ನು ಕಟ್ಟಿಕೊಂಡು ೪ ಬಾರಿ ಒಬ್ಬ ಸಾಮಾನ್ಯ ದಲಿತ ಮಹಿಳೆಯನ್ನು ಅಧಿಕಾರಕ್ಕೆ ತಂದAತೆ, ತಮಿಳುನಾಡಿನಲ್ಲಿ ಎ.ಡಿ.ಎಂ.ಕೆ ಮತ್ತು ಇತ್ತೀಚೆಗೆ ಸಾಮಾನ್ಯ ಕುಟುಂಬದಿAದ ಬಂದ ಜೋಸೆಫ್ ವಿಜಯ್ ರವರು ಟಿ.ವಿ.ಕೆ ಪಕ್ಷವನ್ನು ಕಟ್ಟಿಕೊಂಡು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದAತೆ, ಬಿಹಾರದಲ್ಲಿ ಲೋಕಶಕ್ತಿ ಹೀಗೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಅಧಿಕಾರಕ್ಕೆ ಬಂದAತೆ ತಾವುಗಳೂ ಸಹ ಸ್ವಾಭಿಮಾನದಿಂದ ಸ್ವಂತ ಪಕ್ಷವನ್ನು ಕಟ್ಟಿಕೊಂಡು ಅಧಿಕಾರಕ್ಕೆ ಬಂದು ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.