Home ಜಿಲ್ಲೆ ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ:ಬೆಳಗುಂದಿ

ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ:ಬೆಳಗುಂದಿ

ಸೈದಾಪುರ:ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ. ಇದಕ್ಕಾಗಿ ನಂಬಿಕೆ, ಶ್ರದ್ದೆ, ಶಿಸ್ತಿನೊಂದಿಗೆ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರು ನಮ್ಮದೆಯಾದ ಆತ್ಮಗೌರವನ್ನು ಹೊಂದಿರಬೇಕು ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ವಾಣಿಣ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಅತಿ ಹೆಚ್ಚು ಪುಸ್ತಕಗಳನ್ನು ಓದಬೇಕು. ಇದು ನಮ್ಮನ್ನು ಜ್ಞಾನವಂತರನ್ನಾಗಿ ಮಾಡುವುದು ಅಲ್ಲದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಹಿರಿಯ ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜೀನವನದಲ್ಲಿ ಕೆಲ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು. ದೇಶ ಕಾಯುವ ಯೋಧರನ್ನು ಹಾಗೂ ಅನ್ನ ನೀಡುವ ರೈತರನ್ನು ಗೌರವಿಸಬೇಕು. ಕಷ್ಟ ಪಟ್ಟು ಓದದೆ ಇಷ್ಟ ಪಟ್ಟು ಓದಬೇಕು ಎಂದು ಹೇಳಿದರು.
ಇದಕ್ಕೂ ಮುಂಚೆ ೨೦೨೫-೨೬ನೇ ಸಾಲಿನಲ್ಲಿ ಕಾಲೇಜಿಗೆ ಅತಿ ಹೆಚ್ಚು ಅಂಕಗಳನ್ನು ಪಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕಲಾವತಿ ಹಣಮಂತ ಹಾಗೂ ವಾಣಿಜ್ಯ ವಿಭಾಗದÀ ಶ್ರಾವಣಿ ಶಂಕರಲಿAಗಯ್ಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
೨೦೨೬-೨೭ನೇ ಸಾಲಿನ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಸದಸ್ಯರಾದ ಶರಣಪ್ಪಗೌಡ ಕೌಳೂರು ಹಾಗೂ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಪ್ರಭುಲಿಂಗ ವಾರದ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದರು.
ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಆಡಳಿತ ಮಂಡಳಿಯ ಸದಸ್ಯರಾದ ಬೂದೆಪ್ಪಗೌಡ ಭೀಮನಳ್ಳಿ, ಶರಣಪ್ಪಗೌಡ ಕೌಳೂರು, ಪ್ರಭುಲಿಂಗ ವಾರದ, ಸಿದ್ರಾಮಪ್ಪಗೌಡ ಗೊಂದೆಡಗಿ, ಚನ್ನಾರೆಡ್ಡಿ ಹುಣಿಸೆಮರ, ಸುರೇಶ ಆನಂಪಲ್ಲಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಗೂಳಪ್ಪ.ಎಸ್.ಮಲ್ಹಾರ, ಪ್ರಾಂಶುಪಾಲರುಗಳಾದ ಕರಬಸಯ್ಯ ದಂಡಿಗಿಮಠ, ದೇವಿಂದ್ರ ಪೀರಾ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಾಗರಾಜ ಸ್ವಾಗತಿಸಿದರು. ರುಕ್ಸಾನ ಮತ್ತು ಸಂತೋಷಮ್ಮ ನಿರೂಪಿಸಿದರು. ಕಾವ್ಯ ವಂದಿಸಿದಳು.