
ಮುದ್ದೇಬಿಹಾಳ : ಆಕಸ್ಮಿಕ ಬೆಂಕಿ ತಗುಲಿ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ತಾಲೂಕಿನ ಕುಂಟೋಜಿಯಲ್ಲಿ ನಡೆದಿದೆ.
ಗ್ರಾಮದ ಬಲವಂತಪ್ಪ ನಾಗಪ್ಪ ಸಜ್ಜನ ಎಂಬುವರಿಗೆ ಸೇರಿದ 3.17 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಅಂದಾಜು 6 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ರೈತ ಸಜ್ಜನ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

























