
ವಿಜಯಪುರ, ಜೂ. 17 :ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 7ನೇ ವರ್ಗದ ವಿದ್ಯಾರ್ಥಿ ಅಬುಜಿರ್ ಮಕಾನದಾರ ಈತನು ಹಾವೇರಿ ಜಿಲ್ಲೆಯ ಕ್ರೀಡಾ ವಸತಿ ಶಾಲೆಗೆ ಆಯ್ಕೆಯಾಗಿದ್ದಾನೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ವೈ. ಬಿ. ಗಿರಣಿವಡ್ಡರ ತಿಳಿಸಿದ್ದಾರೆ.
ತಾಲೂಕು ಮಟ್ಟ, ಜಿಲ್ಲಾ ಮಟ್ಟ, ಬೆಳಗಾವಿ ವಿಭಾಗ
ಮಟ್ಟದಲ್ಲಿ ಯುವ ಜನ ಸೇವಾ ಇಲಾಖೆಯ ವತಿಯಿಂದ
ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿಜೇತನಾದ
ಬಳಿಕ ಕ್ರೀಡಾ ವಸತಿ ಶಾಲೆಗೆ ಆಯ್ಕೆಯಾಗಿದ್ದಾನೆ.
ಈತನ ಸಾಧನೆಗೆ ಶಾಲೆಯ ಸಹ ಶಿಕ್ಷಕ ಪ್ರಕಾಶ ವಾಲಿ ಹಾಗೂ ಪ್ರವೀಣ ಕುಂಬಾರ ವಿಶೇಷ ಪ್ರಯತ್ನ ಮಾಡಿ ಈತನ ಸಾಧನೆಗೆ ಪ್ರೇರಣೆ ನೀಡಿದ್ದಾರೆ.
ಈತನ ಸಾಧನೆಗೆ ಎಸ್. ಡಿ. ಎಂ. ಸಿ. ಅಧ್ಯಕ್ಷ ಗೌಡಪ್ಪ ಹೊಸಮನಿ, ಎಸ್. ಡಿ. ಎಂ. ಸಿ. ಸರ್ವ ಸದಸ್ಯರು, ಶಾಲೆಯ
ಶಿಕ್ಷಕರಾದ ರಾಜಶೇಖರ ಮತ್ತಿತರರು ಅಭಿನಂದಿಸಿದ್ದಾರೆ.


























