Home ಜಿಲ್ಲೆ ಬಸ್ ನಿಲ್ದಾಣದಲ್ಲಿ ಚಿತ್ರಗಳ ಮೆರುಗು

ಬಸ್ ನಿಲ್ದಾಣದಲ್ಲಿ ಚಿತ್ರಗಳ ಮೆರುಗು

ಲಕ್ಷೆ÷್ಮÃಶ್ವರ,ನ೪: ಪಟ್ಟಣದ ಹೊಸ ಬಸ್ ನಿಲ್ದಾಣ ಆರಂಭಗೊAಡು ಮೂರು ದಶಕಗಳಾಗಿದ್ದರು ಕಾಂಪೌAಡ್ ಗೋಡೆಗಳು ಸುಣ್ಣ ಬಣ್ಣವಿಲ್ಲದೆ ಹಾಳು ಸುರಿಯುತ್ತಿದ್ದವು.
ಯಾವುದಕ್ಕೂ ಕಾಲ ಕೂಡಿ ಬರಬೇಕು ಎಂಬ ನಿಯಮದಂತೆ ಈ ಬಾರಿಯ ನವಂಬರ್ ೧ ರಾಜ್ಯೋತ್ಸವದ ದಿನದಂದು ಕುಂಚಗಳ ಕಲರವ ಮೂಡಿಬಂದಿತು.


ಕಲಾವಿದ ಶಿಕ್ಷಕ ಪ್ರವೀಣ್ ಗಾಯಕರ ಅವರ ನೇತೃತ್ವದಲ್ಲಿ ಕಲಾವಿದರ ತಂಡ ತಮ್ಮ ಕುಂಚದ ಮೂಲಕ ಕಲೆಯ ಬಲೆಯನ್ನು ಸಾಕಾರಗೊಳಿಸಿದರು.
ಕಾಂಪೌAಡ್ ಗೋಡೆಯ ಎತ್ತ ತಿರುಗಿದರು ಜ್ಞಾನಪೀಠ ಪ್ರಶಸ್ತಿ ಪುರಸ್ಕöÈತರ ಚಿತ್ರಗಳು ಪತ್ರಿಕೆಗಳ ಮಹತ್ವ ಸಾರುವ ಅಕ್ಷರಗಳು ಸಾಮಾಜಿಕ ಕಳಕಳಿಯ ಕಲೆ ಸಾಹಿತ್ಯ ಸಂಸ್ಕöÈತಿ ಪರಂಪರೆ ಇತಿಹಾಸಗಳ ಚಿತ್ರಣ ಮೂಡಿಬಂದಿವೆ.


ಈಗ ಹೊಸ ಬಸ್ ನಿಲ್ದಾಣಕ್ಕೆ ಮೆರಗು ಬಂದಿದ್ದು ನಿಜವಾಗಿಯೂ ಕಲಾವಿದರ ಪರಿಶ್ರಮಕ್ಕೆ ಒಂದು ಸೆಲ್ಯೂಟ್ ಹೇಳಲೇಬೇಕು. ಕಾಂಪೌAಡ್ ಗೋಡೆಗಳ ಮೇಲೆ ದೊಡ್ಡಾಟ ಯಕ್ಷಗಾನ ಬೇಂದ್ರೆ ಕುವೆಂಪು ವಿಕ್ರ ಗೋಕಾಕ ಸೇರಿದಂತೆ ಅನೇಕರ ಚಿತ್ರಗಳು ಕೆಎಸ್‌ಆರ್ಟಿಸಿ ಲಾಂಛನ ನುಡಿಮುತ್ತುಗಳು ಹೀಗೆ ಕಲಾವಿದರು ತಮ್ಮ ಅಭೂತಪೂರ್ವವಾದ ಕಲೆಯನ್ನು ಅರಳಿಸುವ ಮೂಲಕ ಕಲೆಯ ಬಲೆಯ ಸಾಕಾರ ಮಾಡಿದ್ದಾರೆ. ಸದಾ ಸಾವಿರಾರು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುವ ಬಸ್ ನಿಲ್ದಾಣದಲ್ಲಿ ಈ ಚಿತ್ರಕಲೆ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.