
ಸೈದಾಪುರ: ನಾವು ಚಂದ್ರನನ್ನು ತಲುಪಿದ ಹೆಜ್ಜೆ ಅಂತ್ಯವಲ್ಲ ಭಾರತದ ಬಾಹ್ಯಾಕಾಶ ಕನಸಿನ ಹೊಸ ಯುವ ಯುಗದ ಆರಂಭ ಎಂಬ ಸಂದೇಶದೊAದಿಗೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸೋಣ ಎಂದು ಮುಖ್ಯ ಶಿಕ್ಷಕ ಬಿ.ಬಿ.ವಡವಟ್ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಾಹ್ಯಾಕಾಶ ದಿನಾಚರಣೆಯು ಕೇವಲ ಭಾರತದ ಸಾಧನೆಯನ್ನು ಸ್ಮರಿಸುವ ದಿನವಾಗಿರದೆ, ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಹಾಗೂ ನಾವೀನ್ಯತೆಯ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶವನ್ನೂ ಹೊಂದಿದೆ. ಚಂದ್ರಯಾನ-೩ರ ವಿಕ್ರಮ್ ಲ್ಯಾಂಡರ್‌ನಿAದ ಪ್ರಜ್ಞಾನ್ ರೋವರ್ ಹೊರಬಂದು ಚಂದ್ರನ ಮೇಲ್ಮೈಯಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿತು. ಲ್ಯಾಂಡರ್ ಮತ್ತು ರೋವರ್‌ನ ವಿವಿಧ ಉಪಕರಣಗಳು ಚಂದ್ರನ ಮೇಲ್ಮೈಯಲ್ಲಿನ ಭೂಕಂಪನ, ಉಷ್ಣ-ಭೌತಿಕ ಗುಣಲಕ್ಷಣಗಳು, ಪ್ಲಾಸ್ಮಾ ಪರಿಸರ ಹಾಗೂ ಧಾತುಗಳ ಸಂಯೋಜನೆ ಸೇರಿದಂತೆ ಹಲವು ವಿಷಯಗಳ ಕುರಿತು ವೈಜ್ಞಾನಿಕ ದತ್ತಾಂಶ ಸಂಗ್ರಹಿಸಿದೆ. ಇದು ನಮ್ಮ ಭವಿಷ್ಯದದಲ್ಲಿ ಸಹಾಯವಾಗಲಿದೆ. ಇಂತಹ ಪ್ರಯೋಗಗಳ ಬಗ್ಗೆ ತಿಳಿದುಕೊಂಡು ವಿದ್ಯಾರ್ಥಿಗಳ ತಮ್ಮ ಭವಿಷ್ಯದ ಜೊತೆ ದೇಶದ ಪ್ರಗತಿಗೆ ಕೈಜೊಡಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಹಿರಿಯ ಶಿಕ್ಷಕಿ ರಾಧ ಸಂಗೋಳಿಗಿ, ಕಾಸಿಂಬಿ ಇಮ್ತಿಯಾಜ್, ಸುನೀತಾ ತಾರೇಶ, ದೇವೇಂದ್ರಕುಮಾರ ಬಾಗ್ಲಿ, ಬಸಮ್ಮ ಕಲಬುರಗಿ, ಚಂದ್ರಕಲಾ ಶಂಕರ, ಶಾರದಾ, ಮೋನಿಕಾ ಶೆಟ್ಟಿಹಳ್ಳಿ, ತೇಜಸ್ವಿನಿ ಹಿರೇಮಠ, ರೇಣುಕಾ ಸೇರಿದಂತೆ ಇತರರಿದ್ದರು.





























