
ಬೀದರ : ಆಧುನಿಕತೆಯ ಫಲವಾಗಿ ಹುಟ್ಟಿಕೊಂಡ ಸಣ್ಣ, ಸೂಕ್ಷ್ಮಕುಟುಂಬಗಳು ವಸ್ತುವ್ಯಾಮೋಹಿಗಳಾಗಿದ್ದು, ಅವಿಭಕ್ತ ಕುಟುಂಗಳಲ್ಲಿ ಮಾತ್ರ ಜೀವನ ಪ್ರೀತಿ ಸಾಧ್ಯ ಎಂದು ಜಾಗತಿಕ ಲಿಂಗಾಯತ ಮಹಾಸಭಾ, ಬೀದರ ಅಧ್ಯಕ್ಷರಾದ ಬಸವರಾಜ ಧನ್ನೂರ ನುಡಿದರು
ಅವರು ಬೀದರ ವಿದ್ಯಾನಗರ ಕಾಲೋನಿಯ ಬಸವಕೇಂದ್ರದಲ್ಲಿ ಆಯೋಜಿಸಿದ ಬಸವ ಬಾಂಧವ್ಯ ಬಳಗದ 16ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಲೆಕ್ಕಪತ್ರಗಳ ಪಾರದÀರ್ಶಕತೆ ಮತ್ತು ಬದ್ದತೆ, ಶಿಸ್ತು ಇರುವ ಸಂಸ್ಥೆಗಳು ಮಾತ್ರ ಹೆಚ್ಚುಕಾಲ ಬಾಳುತ್ತವೆ. ಅಂಥ ಸಂಸ್ಥೆಗಳಲ್ಲಿ ಬಸವ ಬಾಂಧವ್ಯ ಬಳಗ ಕೂಡ ಒಂದಾಗಿದೆ. ಬಸವ ತತ್ವದ ತಳಹದಿಯಲ್ಲಿ ನಡೆಯುತ್ತಿರುವ ಈ ಸಂಸ್ಥೆ ಜನಪರ ಕಾಳಜಿ ಮೆರೆಯುತ್ತಿದೆ ಎಂದು ಹೇಳಿದರು.
ಬೀದರ ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅವರು ಮಾತನಾಡುತ್ತ ಸಂಘಸಂಸ್ಥೆಗಳು ವ್ಯಾಪಾರೀಕರಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಬಸವ ಬಾಂಧವ್ಯ ಬಳಗ ಜನಸೇವೆಯ ಮೂಲಕ ಮಾನವೀಕರಣವನ್ನು ಪ್ರತಿಪಾದಿಸುತ್ತಿದೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೀದರ ಸರಕಾರಿ ಅರೆಸರಕಾರಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಅವರು ಮಾತನಾಡುತ್ತ ಸಾಮಾಜಿಕ ವಿಘಟನೆ, ಧಾರ್ಮಿಕ ಪಲ್ಲಟಗಳ ಈ ಹೊತ್ತಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ನೆಪವಾಗಿ ಎಲ್ಲರೂ ಸೇರುವುದು ಸಂಸ್ಕøತಿ ಸಂಸ್ಕಾರ ಮಕ್ಕಳಲ್ಲಿ ಬಿತ್ತುತ್ತಿರುವುದ ಔಚಿತ್ಯಪೂರ್ಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದ ಅಧ್ಯಕ್ಷತೆವಹಿಸಿದ ದಾನಿ ಬಾಬುರಾವ ಅವರು ಮಾತನಾಡುತ್ತ ಅಕ್ಷರವಂತರು ಭ್ರಷ್ಟಾರಗಬಹುದು ಆದರೆ ಸಂಸ್ಕಾರವಂತರು ಭ್ರಷ್ಟರಾಗುವುದಿಲ್ಲ. ಆದ್ದರಿಂದ ಬಸವ ಬಾಂಧವ್ಯ ಬಳಗದ ಮೂಲ ಉದ್ದೇಶವೆ ಸಂಸ್ಕಾರ ಕೇಂದ್ರಿತ ಸಮಾಜ ಕಟ್ಟುವುದಾಗಿದೆ ಎಂದು ಅಭಿಪ್ರಾಯಪಟ್ಟರು.
ಬಸವ ಬಾಂಧವ್ಯ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಟಂಕಸಾಲೆ ಅವರ ಸಂಸ್ಥೆ ನಡೆದು ಬಂದ ದಾರಿ, ಮಾಡುತ್ತಿರುವ ಜನಸೇವೆಗಳ ಬಗ್ಗೆ ವಿವರಾವಾಗಿ ಮಾತನಾಡಿದರು
ನಗರಸಭೆ ಸದಸ್ಯರಾದ ಶಶಿ ಹೊಸಳ್ಳಿ, ಕರ್ನಾಟಕ ಪ.ಪೂ ಕಾಲೇಜು ಪ್ರಾಚಾರ್ಯರಾದ ಡಾ|| ಬಸವರಾಜ ಬಲ್ಲೂರ, ಬಸವ ಬಾಂಧವ್ಯ ಬಳಗ ಸದಸ್ಯರಾದ ಅಕ್ಕಮಹಾದೇವಿ ಸ್ವಾಮಿ ಮೊದಲಾದವರು ಮಾತನಾಡಿದರು.
ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ, ಹುಲಸೂರಿನ ಪೂಜ್ಯ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ಆರ್ಶೀವಚನ ನೀಡಿದರು ಸಂಗೀತ ಕಲಾವಿದರಾದ ಅರ್ಚನಾ ಸಂತೋಷ ಸ್ವಾಮಿ, ರೆವಣಪ್ಪ ಮೂಲಗೆ ವಚನ ಗಾಯನ ನಡೆಸಿಕೊಟ್ಟರು. ಬಸವಕೇಂದ್ರದ ರಾಜಮ್ಮ ಚಿಕಪೆಟೆ, ವಿದ್ಯಾವತಿ ಬಲ್ಲೂರ ಮೊದಲಾದವರು ಬಸವ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀ ಶಂಕರರಾವ ಸಜ್ಜನಶೆಟ್ಟಿ ಸ್ವಾಗತಿಸಿದರೆ ಶಿಲ್ಪಾ ವ್ಮಜಗೆ ನಿರೂಪಿಸಿದರು ವಿಜಯಕುಮಾರ ವಡ್ಡಿ ವಂದಿಸಿದರು. ಸುಮಾರು 20 ಆದರ್ಶ ದಂಪತಿಗಳಿಗೆ ಬಸವ ಬಾಂಧವ್ಯ ಬಳಗದಿಂದ ಸನ್ನಾನಿಸಿ ಗೌರವಿಸಲಾಯಿತು.




























