Home ಜಿಲ್ಲೆ ಸರ್ಕಾರದಿಂದ ಸಹಾಯ ಹಸ್ತ :ಭರವಸೆ

ಸರ್ಕಾರದಿಂದ ಸಹಾಯ ಹಸ್ತ :ಭರವಸೆ


ಚನ್ನಮ್ಮನ ಕಿತ್ತೂರ,ಜು.೧೨: ಸಮೀಪದ ಖಾನಾಪೂರ ವಿಧಾನಸಭಾ ಕ್ಷೇತ್ರದ ರೈತರಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಶಾಸಕ ವಿಠ್ಠಲ್.ಸೋ.ಹಲಗೇಕರವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರಿಗೆ ಮನವಿ ಸಲ್ಲಿಸಿದರು.


ನಂತರ ಅವರು ಮಾತನಾಡಿ ಈ ಭಾಗದ ರೈತರಿಗೆ ನೀರಾವರಿ ಶಾಶ್ವತ ಪರಿಹಾರ ಕಲ್ಪಿಸಬೇಕು. ನನ್ನ ಕ್ಷೇತ್ರ ಹಿಂದೂಳಿದ ಕ್ಷೇತ್ರ ಗುಡ್ಡಗಾಡಿನಲ್ಲಿರುವ ಜನರ ಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೆ ಹೇಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದರು. ಮನವಿಯಲ್ಲಿ ರೂ. ೧೦೦ಕೋಟಿ ಬ್ರೀಜ್-ಬ್ಯಾರೇಜ್ ಹಾಗೂ ಏತ ನೀರಾವರಿ, ರೂ. ೫೦ ಕೋಟಿ ಪಾರಿಶ್ವಾಡ-ಅವರೋಳ್ಳಿ ಗ್ರಾಮಗಳ ಹತ್ತಿರ ಏತ ನೀರಾವರಿ, ಜಳಗಾ ಏತ ನೀರಾವರಿಗೆ ರೂ. ೧೫ ಕೋಟಿ, ಶೆಡೆಗಾಳಿ ಸಮೀಪ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ರೂ. ೧೫ ಕೋಟಿ, ನೀಲವಡೆ ಗ್ರಾಮದ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ರೀಜ್-ಬ್ಯಾರೇಜ್ ರೂ.೧೦ ಕೋಟಿ, ತೋರಾಳಿ ಗ್ರಾಮಕ್ಕೆ ಬ್ರೀಜ್-ಬ್ಯಾರೇಜ್ ರೂ. ೧೦ ಕೋಟಿ, ಹೀಗೆ ಅಂದಾಜು ವೆಚ್ಚ ರೂ. ೧೦೦ ಕೋಟಿ, ಈ ಯೋಜನೆಗಳು ಅನುಷ್ಠಾನಗೊಂಡರೆ ರೈತರಿಗೆ ಶಾಶ್ವತ ನೀರಾವರಿ ಜನರಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರ, ಜೊತೆಗೆ ಅಂತರ್ಜಲ ಹೆಚ್ಚಳ, ಜಲ ರಕ್ಷಣೆ, ಕೃಷಿ ಉತ್ಪಾದನೆ ವೃದ್ದಿಸಿ ಜನರ ಜೀವನ ಮಟ್ಟ ಸುಧಾರಣೆಯಾಗಲಿದೆ ಎಂದರು.
ಸಮಸ್ಯೆ ಪರಿಹಾರಕ್ಕೆ ಸರ್ಕಾದಿಂದ ಸಹಾಯದ ಭರವಸೆಯನ್ನು ಸಿ.ಎಂ. ನೀಡಿದರು.