Home ಜಿಲ್ಲೆ ಕಲಬುರಗಿ ಗ್ರಾಮದೇವತೆಯರ ಒಡವೆಗಳಿಗೆ ಕನ್ನ

ಗ್ರಾಮದೇವತೆಯರ ಒಡವೆಗಳಿಗೆ ಕನ್ನ

ಜೇವರಗಿ,ಜೂ 11: ತಾಲ್ಲೂಕಿನ ಗಂವ್ಹಾರ ಹಾಗೂ ಮಾರಡಗಿ (ಎಸ್.ಎ) ಗ್ರಾಮಗಳ ದೇವಸ್ಥಾನಗಳಲ್ಲಿ ದುಷ್ಕರ್ಮಿಗಳು ಗ್ರಾಮ ದೇವತೆಯರ ಮೂರ್ತಿಗಳನ್ನು ಹಾನಿಗೊಳಿಸಿ, ಮೂರ್ತಿಗಳ ಬಂಗಾರದ ಒಡವೆಗಳನ್ನು ದೋಚಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಮಾರಡಗಿ (ಎಸ್.ಎ.) ಗ್ರಾಮದ ಶ್ರೀದೇವಿ ದೇವಸ್ಥಾನದಲ್ಲಿ ದೇವಿ ಮೂರ್ತಿಯ 4 ಚಿನ್ನದ ಮಾಂಗಲ್ಯ ಸರ, 2 ಮೂಗುತಿ, 20 ಗ್ರಾಂ ನೆಕ್ಸೆಸ್ ಹಾಗೂ 2 ಬೆಳ್ಳಿ ಲಿಂಗದಕಾಯಿಗಳನ್ನು ಕಳವು ಮಾಡಲಾಗಿದೆ. ಗಂವ್ಹಾರ ಗ್ರಾಮದ ಶ್ರೀಮರೆಮ್ಮ ದೇವಸ್ಥಾನದಲ್ಲಿ ದೇವಿ ಮೂರ್ತಿಯ 4 ಮಾಂಗಲ್ಯ ಸರದ ಗುಂಡುಗಳು, 5 ಗ್ರಾಂ ನೆಕ್ಸೆಸ್, ಬೆಳ್ಳಿಲಿಂಗ ಸೇರಿದಂತೆ ಒಡವೆಗಳನ್ನು ಕಳವು ಮಾಡಲಾಗಿದೆ.
É.ಘಟನೆಯಿಂದ ಗಂವ್ಹಾರ ಹಾಗೂ ಮಾರಡಗಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಜೇವರ್ಗಿ ಪೆÇಲೀಸ್ ಠಾಣೆಯ ಪಿಎಸ್‍ಐ ಗಜಾನಂದ ಬಿರಾದಾರ ಹಾಗೂಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೆÇಲಿಸರು ತಿಳಿಸಿದ್ದಾರೆ. ಈ ಕುರಿತು ಜೇವರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ