
ರಬಕವಿ-ಬನಹಟ್ಟಿ,ಜೂ.೨: ಸರ್ಕಾರಗಳು ಇಂದು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಿ ಪ್ರಾಶಸ್ತö್ಯ ನೀಡುತ್ತಿವೆ. ತಮ್ಮ ಸಂತಾನಗಳಿಗೆ ಶಿಕ್ಷಣ ಕೊಡಿಸುವ ಶೃದ್ಧೆ ಪಾಲಕರಲ್ಲಿಯೂ ಹೆಚ್ಚಿದೆ. ಗ್ರಾಮೀಣ ಪರಿಸರದಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳಿಂದಾಗಿ ಸಮಾಜ ಸಂಘಟಿತವಾಗಿ ಎಲ್ಲ ಸೌಕರ್ಯಗಳನ್ನು ಮಕ್ಕಳಿಗೆ ತಲುಪಿಸಲು ಟೊಂಕ ಕಟ್ಟಿ ನಿಂತ ಪರಿಣಾಮ ಮದನಮಟ್ಟಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ನಗರ ಪ್ರದೇಶಗಳ ಮಕ್ಕಳೂ ಪ್ರವೇಶಾತಿಗಾಗಿ ಬರುತ್ತಿವೆ. ಪ್ರತಿ ಗ್ರಾಮದಲ್ಲಿಯೂ ಮದನಮಟ್ಟಿ ಗ್ರಾಮಸ್ಥರಂತೆ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದಲ್ಲಿ ದೇಶ ಸದೃಢಗೊಳ್ಳುತ್ತದೆಂದು ಮುಖ್ಯ ಗುರು ರವೀಂದ್ರ ಸಂಪಗಾವಿ ಹೇಳಿದರು.
ಸೋಮವಾರದಂದು ತಾಲೂಕಿನ ಮದನಮಟ್ಟಿ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಪ್ರಾಸ್ತಾವಿಕ ಮಾತುಗಳಾಡಿದ ರವೀಂದ್ರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಶಸ್ತö್ಯ ನೀಡುವಲ್ಲಿ ಇಡೀ ಸಮಾಜವೇ ಮುಂದಾದರೆ ಶಿಕ್ಷಕರ ಹೊಣೆಗಾರಿಕೆ ಹೆಚ್ಚುತ್ತದೆ. ಮೊದಲ ದಿನವೇ ೨೩೭ ಮಕ್ಕಳು ಹಾಜರಾಗಿರುವುದು ಗ್ರಾಮೀಣರಲ್ಲಿನ ಶಿಕ್ಷಣ ಪ್ರೇಮದ ಪ್ರತೀಕವಾಗಿದೆಯೆಂದರು. ಜಿಪಂ ಮಾಜಿ ಸದಸ್ಯೆ ಸಾವಿತ್ರಿ ಬಾಬಾಗೌಡ ಪಾಟೀಲ ಮಾತನಾಡಿ ನಮ್ಮ ಗ್ರಾಮದಲ್ಲಿ ಸರ್ಕಾರ ನೀಡುವ ಅನುದಾನಕ್ಕಿಂತ ನಾವೇ ಮುಂದೆ ನಿಂತು ಮಕ್ಕಳ ಅವಶ್ಯಕತೆ ಗಮನಿಸಿ ಕಲಿಕೆಗೆ ಅಗತ್ಯ ಸೌಕರ್ಯಗಳನ್ನು ಸಮುದಾಯಿತ್ವದಲ್ಲಿ ಕಲ್ಪಿಸುತ್ತೇವೆ. ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಕಾ ಸಾಧನೆ ಮೆರೆಸಲು ಮುಂದಾಗಬೇಕು ಮತ್ತು ಪಾಲಕರು ಯಾವುದೇ ಮಗು ಗೈರಾಗದಂತೆ ನೋಡಿಕೊಳ್ಳುವ ಜೊತೆಗೆ ಮಗುವಿನತ್ತ ಗಮನ ಹರಿಸಬೇಕೆಂದರು. ಯುವ ಧುರೀಣ ಸಂಗಮೇಶಗೌಡ ಪಾಟೀಲ, ಬಾಲಚಂದ್ ನಂದೆಪ್ಪನವರ ಮಾತನಾಡಿ ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗರಿಷ್ಠವಿದ್ದು, ಮುಂದಿನ ವಿದ್ಯಾಭ್ಯಾಸಕ್ಕೆ ಬಾಲಿಕೆಯರು ಸೇರಿದಂತೆ ಮಕ್ಕಳು ಪರಸ್ಥಳಕ್ಕೆ ತೆರಳದೇ ಪ್ರೌಢಶಾಲಾ ಶಿಕ್ಷಣವನ್ನು ನಮ್ಮಲ್ಲೆ ಮುಂದುವರೆೆಸುವAತೆ ಸರ್ಕಾರ ನಮ್ಮ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡಬೇಕೆಂದರು. ತಾಲೂಕು ಬಿಸಿಯೂಟ ಅಧಿಕಾರಿ ಸಿ.ಎಸ್. ಕಲ್ಯಾಣಿ ಮಕ್ಕಳ ಶೈಕ್ಷಣಿಕ ಸಾಧÀನೆಗೆ ಇಂಬುಗೊಡುವತ್ತ ಗ್ರಾಮಸ್ಥರು ಇಲಾಖೆ ಜೊತೆಗೆ ಸಂಘಟಿತರಾಗಿ ಸಹಕರಿಸುತ್ತಿರುವುದು ಪ್ರಶಂಸಾರ್ಹವೆAದರು.
ವೇದಿಕೆಯಲ್ಲಿ ಬಸವರಾಜ ಮಲ್ಲಣ್ಣವರ, ಮಲ್ಲಿಕಾರ್ಜುನ ಮಲ್ಲಣ್ಣವರ, ಎಸ್ಡಿಎಂಸಿಯ ಸುನೀಲ ಮದನಮಟ್ಟಿ, ಶಿಕ್ಷಣ ಸಂಯೋಜಕ ಬಿ.ಎಂ.ಹಳೇಮನಿ, ಶಿಲ್ಪಾ ಮಗದುಂ, ಮಾಲಾಶ್ರೀ ಹನುಮನ್ನವರ, ಸಂಗೀತಾ ಯಲ್ಲಟ್ಟಿ, ಮಹಾದೇವಿ ಪಾಟೀಲ, ಗಿರಿಜಾ, ಮಹಾದೇವಿ ಸೇರಿದಂತೆ ಪ್ರಮುಖರಿದ್ದರು.































