
ಸಂಜೆವಾಣಿ ವಾರ್ತೆ
ತಿ.ನರಸೀಪುರ ನ.12- ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ವರಿಷ್ಠರು ಇನ್ನೂ ತೀರ್ಮಾನಿಸಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಮೂಗೂರು ಜಿ.ಪಂ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂ.ಪಿ.ಛಾಯಾಕುಮಾರ್ ಅವರೊಂದಿಗೆ ಬೇಟಿಯಾದ ಗ್ರಾಮದ ಮುಖಂಡರು ಜೊತೆ ನಂಜನಗೂಡು ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕ್ಷೇತ್ರಗಳ ಹಂಚಿಕೆ ಸಂಬಂಧ ಚರ್ಚೆ ನಡೆಸಿ ಮಾತನಾಡಿದ ಅವರು ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಸೀಟುಗಳ ಹಂಚಿಕೆ ಸಂಬಂಧ ಯಾವುದೇ ನಿರ್ಧಾರವಾಗಿಲ್ಲ ಎಂದರು.
ರಾಜ್ಯ ಸರ್ಕಾರ ಯಾವ ಸಂದರ್ಭದಲ್ಲಿಯೂ ಚುನಾವಣೆ ನಡೆಸಿದರೆ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಗಳನ್ನ ಅಣಿಗೊಳಿಸಿ ಎಂಬಷ್ಟೇ ಸೂಚನೆಯನ್ನು ರಾಜ್ಯ ನಾಯಕರು ನೀಡಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹಾಗೂ ಕ್ಷೇತ್ರಗಳನ್ನು ಹಂಚಿಕೆ ಮಾಡುವ ಬಗ್ಗೆಯೂ ತೀರ್ಮಾನಿಸಿಲ್ಲ. ಹಾಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಬೇಕೆಂಬ ಅಭಿಲಾಷೆಯನ್ನ ತಾವು ಹೊಂದಿದ್ದೇವೆ ಎಂದು ಕುಂಬ್ರಹಳ್ಳಿ ಸುಬ್ಬಣ್ಣ ತಿಳಿಸಿದರು
ಬಿ.ಜೆ.ಪಿ.ಶಕ್ತಿ ಕೇಂದ್ರ ಮಾಜಿ ಅಧ್ಯಕ್ಷ ಅರವಿಂದ್, ಹಿರಿಯ ಮುಖಂಡರಾದ ಎಮ್.ಆರ್. ಶಿವಮೂರ್ತಿ, ಎಂ. ಆರ್.ಸುಂದರ್, ಕುಮಾರಸ್ವಾಮಿ ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಡಿ.ಲೋಕೇಶ್, ಕುಮಾರ್, ಮಟನ್ ಶಾಂತರಾಜ್, ಜಯಶಂಕರ್, ಜಿ.ಪಿ.ಪುಟ್ಟ ಮಾದಯ್ಯ, ರಾಜಣ್ಣ ಸೇಟು, ಮಹೇಶಣ್ಣ, ಮಾದೇಶ್ ನಾಯ್ಕ, ಡಿ.ಕೆ.ಶಿವಕುಮಾರ್, ರೇವಣ್ಣ, ಮಹೇಶ್ ( ಟೈಲ್ಸ್ ), ಚೇತನ್, ಕೊತ್ತೇಗಾಲ ಜೆಡಿಎಸ್ ಮುಖಂಡರಾದ ರಮೇಶ್, ನವೀನ್, ಪ್ರಭುಸ್ವಾಮಿ ಹಾಗೂ ಮಹದೇವ್, ಕಾರ್ ಕುಮಾರ್, ಮಣಿ, ರತ್ನ ಕಂಫರ್ಟ್ ಮೆನೇಜರ್ ಮಹೇಶ್ ಸೇರಿದಂತೆ ಇತರರು ಇದ್ದರು.





















