ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಕಾರ್ಯಕ್ರಮದಲ್ಲಿ ಗುಳೇದಗುಡ್ಡ ಪಟ್ಟಣದ ಚಂದನವಾಹಿನಿಯ ಗಾಯಕ ಬಸವರಾಜ ಸಿಂದಗಿಮಠ ತಂಡದವರಿAದ ಮೈಸೂರಿನ ಕಲಾಮಂದಿರದಲ್ಲಿ ಮಂಗಳವಾರ ಸಂಜೆ ತತ್ವಪದ ಗಾಯನ ಕಾರ್ಯಕ್ರಮ ಜರುಗಿತು. ಸಂಗೀತ ಶಿಕ್ಷಕ ಶ್ರೀಕಾಂತ ಚಿಮ್ಮಲ, ವೈ?À್ಣವಿ ಗೂಳಿ, ಅಖಂಡೇಶ ರೇವಡಿ, ಜಗನ್ನಾಥ ಕೆಂದೂಳಿ, ಪುಟ್ಟರಾಜ ಬಿನ್ನಾಳ, ರವಿಶಿವಕುಮಾರ,ಅವರು ಸಂಗೀತ ರಸದೌತಣ ನೀಡಿ ಜನರನ್ನು ರಂಜಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಾವಿದರಿಗೆ ಮೈಸೂರು ದಸರಾ ಉತ್ಸವ ಸಮಿತಿಯವರು ಪ್ರಶಸ್ತಿ ನೀಡಿ ಗೌರವಿಸಿದರು.