Home ಜಿಲ್ಲೆ ಬೆಂಕಿ ಅವಘಡ: ಭಾರಿ ಹಾನಿ

ಬೆಂಕಿ ಅವಘಡ: ಭಾರಿ ಹಾನಿ


ಲಕ್ಷೆ÷್ಮÃಶ್ವರ,ಅ.೧೫: ಪಟ್ಟಣದ ಪದ್ಮಾವತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಬೆಂಕಿಗಾಹುತಿಯಾಗಿದೆ. ಬುಧವಾರ ಬೆಳಗಿನ ಜಾವ ೪.೩೦ ರ ಸುಮಾರಿಗೆ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಸುಮಾರು ಭಾರಿ ಹಾನಿಯುಂಟಾಗಿರುವದು ತಿಳಿದು ಬಂದಿದೆ.


ಪಟ್ಟಣದ ಹುಬ್ಬಳ್ಳಿ ರಸ್ತೆಗೆ ಹೊಂದಿಕೊoಡಿರುವ ಪದಮ ಶಾಂತಿಲಾಲ್ ಮುಥಾ ಒಡೆತನದ ಪದ್ಮಾವತಿ ಜಿನ್ನಿಂಗ್ ಪ್ಯಾಕ್ಟರಿಯಲ್ಲಿ ಈ ಘಟನೆ ಸಂಭವಿಸಿದೆ. ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಮಿಲ್‌ನಲ್ಲಿ ಕೂಲಿ ಕಾರ್ಮಿಕರು ಇರಲಿಲ್ಲ ಎನ್ನಲಾಗಿದ್ದು ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.


ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಬಂಗಾರಪ್ಪ ವೈ ಟಿ ಹಾಗೂ ಪಟ್ಟಣದ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡವು. ಫ್ಯಾಕ್ಟರಿಯಲ್ಲಿ ಸಂಗ್ರಹಿಸಲಾಗಿದ್ದ ಹತ್ತಿಗೆ ಬೆಂಕಿ ಹೊತ್ತಿಕೊಂಡಿದ್ದರಿoದ ಅದನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು.
ಘಟನೆಯಿಂದ ಫ್ಯಾಕ್ಟರಿಯಲ್ಲಿದ್ದ ಹತ್ತಿ, ಅರಳೆಯ ಬೆಲ್‌ಗಳು ಸೇರಿದಂತೆ ಇತರ ವಸ್ತುಗಳಿಗೆ ಹಾನಿಯಾಗಿರುವ ಸಾಧ್ಯತೆಯಿದೆ. ಒಟ್ಟು ನಷ್ಟದ , ನಿಖರವಾದ ಹಾನಿಯ ಪ್ರಮಾಣ ಅಧಿಕೃತ ಪರಿಶೀಲನೆಯ ಬಳಿಕ ಸ್ಪಷ್ಟವಾಗಬೇಕಾಗಿದೆ. ಈ ಕುರಿತಂತೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.