Home ಜಿಲ್ಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟಕ್ಕೆ ಆಯ್ಕೆ


ನವಲಗುಂದ,ಅ.೫:
ಸ್ಥಳೀಯ ಶಂಕರ ಮಹಾವಿದ್ಯಾಲಯ ಆವರಣದಲ್ಲಿ ಜರುಗಿದ ಪ್ರೌಢಶಾಲಾ ವಿಭಾಗ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಲವಡಿ ಗ್ರಾಮದ ಶ್ರೀ ಗುರುಶಾಂತೇಶ್ವರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಉಮೇಶ ನರಗುಂದ ೩೦೦೦ ಸಾ ಮೀ ಓಟದಲ್ಲಿ ದ್ವಿತೀಯ, ತಯಬ ಕಳ್ಳಿಮನಿ ೮೦ ಮೀ ಅಡೆತಡೆ ಓಟ ದ್ವಿತೀಯ, ಅಶ್ವಿನಿ ತಳವಾರ್ ತ್ರಿವಿಧ ಜಿಗಿತದಲ್ಲಿ ಪ್ರಥಮ ಹಾಗೂ ೧೫೦೦ ಮೀಟರ್ ಓಟ ದ್ವಿತೀಯ, ಕಾವೇರಿ ಮುಂಡರಗಿ ಉದ್ದ ಜಿಗಿತ ಪ್ರಥಮ ಸ್ಥಾನ, ಸೌಪರ್ಣಿ ಮಳ್ಳಪ್ಪನವರ್ ೩೦೦೦ ಮೀ ಓಟದಲ್ಲಿ ಪ್ರಥಮ, ಲಕ್ಷಿ÷್ಮ ಅಂಕಲಿ ೮೦ ಮೀಟರ ಅಡೆತಡೆ ಓಟ ದ್ವಿತೀಯ ಹೀಗೆ ಒಟ್ಟು ಏಳು ಆಟಗಳಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಶಾಲಾ ಆಡಳಿತ ಮಂಡಳಿ ಹಾಗೂ ಪ್ರದಾನಗುರುಗಳು ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.