
ಚನ್ನಮ್ಮನ ಕಿತ್ತೂರ,ಅ.೫: ಐತಿಹಾಸಿಕ ವೀರರಾಣಿ ಕಿತ್ತೂರ ಚನ್ನಮ್ಮನ ಉತ್ಸವದ ಪ್ರಯುಕ್ತ ಅಕ್ಟೋಬರ ೨೩,೨೪,೨೫ರವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಮಂತ್ರಿಗಳು, ಮಠಾಧೀಶರು, ಗಣ್ಯರು, ಕಲಾವಿದರು, ಹಿರಿಯ ಅಧಿಕಾರಿಗಳು ಆಗಮಿಸುವ ಹಿನ್ನೆಲೆ ಕಿತ್ತೂರು ಚನ್ನಮ್ಮನ ಕೋಟೆಗೆ ಭೇಟಿನೀಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ(ಎಸ್‌ಪಿ) ಕೆ.ರಾಮರಾಜನ್ ಭದ್ರತಾ ಹಾಗೂ ಅಗತ್ಯ ಸಿದ್ದತೆಗಳನ್ನು ಪರಿಶೀಲಿಸಿ ಮಾತನಾಡಿ ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಪೋಲಿಸ್ ಬಿಗಿಬಂದೋಬಸ್ತ ಏರ್ಪಡಿಸಬೇಕೆಂದು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಉಪವಿಭಾಗಾಧಿಕಾರಿ ಡಾ. ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಭರತ್.ಎಸ್., ಕ್ರೆöÊಂ ಪಿಎಸ್‌ಐ ಗಂಗಾಧರ ಹಂಪಣ್ಣವರ, ಕ್ಯೂರೇಟರ್ ರಾಘವೇಂದ್ರ, ಪೇದೆಗಳಿದ್ದರು.























