Home ಜಿಲ್ಲೆ ಕಲಬುರಗಿ ಬಸ್ ಹತ್ತುವಾಗ 10 ಗ್ರಾಂ.ಬಂಗಾರದ ಬೋರಮಳ ಕಳವು

ಬಸ್ ಹತ್ತುವಾಗ 10 ಗ್ರಾಂ.ಬಂಗಾರದ ಬೋರಮಳ ಕಳವು

ಕಲಬುರಗಿ,ಅ.5-ಮಹಿಳೆಯೊಬ್ಬರು ಬಸ್ ಹತ್ತುವಾಗ ಅವರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 80 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಬೋರಮಳ ಕಳವಾಗಿರುವ ಘಟನೆ ನಡೆದಿದೆ.
ಇಲ್ಲಿನ ಆದರ್ಶ ನಗರದ ಸುಶೀಲಾಬಾಯಿ ವಿಜಕುಮಾರ ಮುಕ್ರಂಬಿ ಎಂಬುವವರು ಸೆ.13ರಂದು ಸಂಬಂಧಿಕರ ಮನೆ ಶಾಂತಿ ಕಾರ್ಯಕ್ರಮಕ್ಕೆಂದು ಕಮಲಾಪುರ ತಾಲ್ಲೂಕಿನ ಬಾಚನಾಳ ಗ್ರಾಮಕ್ಕೆ ಹೋಗಲು ಹುಮನಾಬಾದ ರಿಂಗ್ ರಸ್ತೆಯ ಹತ್ತಿರ ಬಸ್ಸಿಗಾಗಿ ಕಾಯುತ್ತ ನಿಂತಿದ್ದು, ಈ ವೇಳೆ ಬೋದರ್‍ಗೆ ಹೋಗುವ ಬಸ್ ಹತ್ತಿದ್ದಾರೆ. ಬಸ್ ಹತ್ತುವ ವೇಳೆ ನೂಕುನುಗ್ಗಲಿನಲ್ಲಿ ಅವರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 80 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಬೋರಮಳ ಕಳವು ಮಾಡಲಾಗಿದೆ. ಈ ಸಂಬಂಧ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.