
ವಿಜಯಪುರ, ಅ. 5: ಟಿಪ್ಪರ್‍ವೊಂದು ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದ ಪರಿಣಾಮ ಶುಲ್ಕ ಸಂಗ್ರಹ ಕೇಂದ್ರ ಸಂಪೂರ್ಣ ನುಜ್ಜುಗುಜ್ಜಾಗಿ, ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡ ಘಟನೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಬಳಿ ಭಾನುವಾರ ನಸುಕಿನ ಜಾವ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ-52ರಲ್ಲಿರುವ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾಗೆ ಸೇರಿದ ಟೋಲ್ ಪ್ಲಾಜಾಗೆ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಶುಲ್ಕ ಸಂಗ್ರಹಿಸುವ ಕಟ್ಟಡ ಹಾಗೂ ಟೋಲ್ ವ್ಯವಸ್ಥೆಗೆ ಭಾರಿ ಹಾನಿಯಾಗಿದೆ.
ಟೋಲ್ ಪ್ಲಾಜಾದ ಪ್ರಮುಖ ಭಾಗ ಹಾನಿಗೊಳಗಾದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿ, ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ವಿಜಯಪುರ-ಕಲಬುರಗಿ ಮಾರ್ಗದಲ್ಲಿ ಸಂಚಾರದ ಮೇಲೆ ಅಪಘಾತದ ಪರಿಣಾಮ ಬೀರಿತು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೆÇಲೀಸರು ಅಪಘಾತಕ್ಕೀಡಾದ ಟಿಪ್ಪರ್‍ನ್ನು ತೆರವುಗೊಳಿಸಿ, ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅದೃಷ್ಟವಶಾತ್ ಟಿಪ್ಪರ್ ಡಿಕ್ಕಿಯ ತೀವ್ರತೆಯ ನಡುವೆಯೂ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಘಟನೆ ಸಿಂದಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದಿಂದ ಉಂಟಾದ ಹಾನಿಯ ಕುರಿತು ಪರಿಶೀಲನೆ ಮುಂದುವರಿದಿದೆ.























