
ಬೀದರ್: ನಗರದ ಗಾಂಧಿಗAಜ್‌ನಲ್ಲಿ ನೂತನವಾಗಿ ನಿರ್ಮಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
ಗಾಂಧಿಗAಜ್‌ನಲ್ಲಿ ನಿರ್ಮಿಸುತ್ತಿರುವ ಮಹಾತ್ಮ ಗಾಂಧಿ ವೃತ್ತದ ಕಾಮಗಾರಿ ಅಕ್ಟೋಬರ್ ತಿಂಗಳಲ್ಲೇ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ವೃತ್ತದಲ್ಲಿ ಕರಿ ಕಲ್ಲಿನಲ್ಲಿ ಕೆತ್ತಲಾದ ಮಹಾತ್ಮ ಗಾಂಧಿ ಅವರ ಸುಂದರ ಧ್ಯಾನಸ್ಥ ಮೂರ್ತಿ ಅಳವಡಿಸಲಿದ್ದು, ಜೈಪುರದಿಂದ ಮೂರ್ತಿ ಬರಲಿದೆ ಎಂದು ಹೇಳಿದರು.
ಕಾಮಗಾರಿ ಪೂರ್ಣಗೊಂಡ ನಂತರ ಎಲ್ಲ ವ್ಯಾಪಾರಸ್ಥರ ಸಹಭಾಗಿತ್ವದಲ್ಲಿ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ವಿವಿಧ ಸಮಾಜ, ಸಂಘ, ಸಂಸ್ಥೆಗಳ ಪ್ರಮುಖರನ್ನು ಆಹ್ವಾನಿಸಿ, ಅನಾವಣಗೊಳಿಸಲಾಗುವುದು ಎಂದು ತಿಳಿಸಿದರು.
ಗಾಂಧಿ ಅವರ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಸ್ವಚ್ಛತೆ ಹಾಗೂ ದೇಶ ಭಕ್ತಿಯ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ನಿರ್ದೇಶಕರಾದ ನಾಗಶೆಟ್ಟೆಪ್ಪ ಕಾರಾಮುಂಗಿ, ಖಜಾಂಚಿ ಬಂಡೆಪ್ಪ ಗಡ್ಡೆ, ಪ್ರಮುಖ ವ್ಯಾಪಾರಸ್ಥರಾದ ಗುಂಡಪ್ಪ ಎಮ್ಮೆ, ವೀರಭದ್ರಪ್ಪ ಪಾಟೀಲ ಕನ್ನಳ್ಳಿ, ಬಾಲಾಜಿ, ಬಸವರಾಜ ಲಾಧಾ, ರಾಜಕುಮಾರ ಹಜ್ಜರಗಿ, ಸಿದ್ದಪ್ಪ ಗುನ್ನಳ್ಳಿ, ವೀರಭದ್ರಯ್ಯ ಸ್ವಾಮಿ, ದತ್ತು, ಶಂಕರಯ್ಯ ಸ್ವಾಮಿ ಚಿಟ್ಟಾ, ಅಶೋಕ, ರಾಜಕುಮಾರ ರತ್ನಾಪುರ, ಶ್ರೀನಿವಾಸ್ ಚಿನಗೆಪಲ್ಲಿ, ಧೂಳಪ್ಪ ಕಾಶೆಂಪುರ ಮತ್ತಿತರರು ಉಪಸ್ಥಿತರಿದ್ದರು.























