Home ಜಿಲ್ಲೆ ಕಲಬುರಗಿ ಬೈಕ್ ಕಳ್ಳನ ಬಂಧನ

ಬೈಕ್ ಕಳ್ಳನ ಬಂಧನ

ಕಲಬುರಗಿ,ಸೆ.13-ಬೈಕ್ ಕಳ್ಳನೊಬ್ಬನನ್ನು ಬಂಧಿಸಿರುವ ಸೇಡಂ ಪೊಲೀಸರು ಮೂರು ಬೈಕ್‍ಗಳನ್ನು ಜಪ್ತಿ ಮಾಡಿದ್ದಾರೆ.
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಗ್ರಾಮದ ಇಮ್ತಿಯಾಜ್ ತಂದೆ ಅಬ್ದುಲ್ ರಶೀದ್ ಶೇಖ್ ಎಂಬಾತನನ್ನು ಬಂಧಿಸಿ ಮೂರು ಬೈಕ್ ವಶ ಪಡಿಸಿಕೊಂಡಿದ್ದಾರೆ.
ಮನೆಯ ಮುಂದೆ ನಿಲ್ಲಿಸಿದ ಬೈಕ್ ಕಳವಾದ ಬಗ್ಗೆ ಸೇಡಂನ ರೈಲ್ವೆ ಸ್ಟೇಷನ್ ಏರಿಯಾದ ಸುರೇಶ ನಾಯಕ್ ಅವರು ಸೇಡಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗಾಗಿ ಚಿಂಚೋಳಿ ಉಪ ವಿಭಾಗದ ಡಿಎಸ್‍ಪಿ ಸಂಗಮನಾಥ ಎಸ್.ಹಿರೇಮಠ, ಸೇಡಂ ಸಿಪಿಐ ಮಹಾದೇವ ಡಿ.ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐಗಳಾದ ಉಪೇಂದ್ರಕುಮಾರ, ಶರಣಪ್ಪ ಜಾಕನಳ್ಳಿ ಅವರ ನೇತೃತ್ವದಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ನಾಗರಾಜ, ಬಾಲಕೃಷ್ಣ ರೆಡ್ಡಿ, ಶಿವಕುಮಾರ ಮತ್ತು ಸಚಿನ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್.ಪಿ.ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.