Home ಜಿಲ್ಲೆ ಕಲಬುರಗಿ ಜೂಜಾಟ:ನಾಲ್ವರು ಬಂಧನ

ಜೂಜಾಟ:ನಾಲ್ವರು ಬಂಧನ

ಕಲಬುರಗಿ,ಸೆ.13-ನಗರದ ಕಪನೂರು ಇಂಡಸ್ಟ್ರಿಯಲ್ ಏರಿಯಾದ ಹೊಲದ ಖುಲ್ಲಾ ಜಾಗದಲ್ಲಿ ಬೇವಿನ ಮರದ ಕೆಳಗೆ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಶಶಿಕಲಾ, ಸಿಬ್ಬಂದಿಗಳಾದ ಜಗದೀಶ, ಗುಂಡೇರಾಯ, ಪ್ರಭುರಾಜ, ಶಿವರಾಜ, ಶ್ರೀನಿವಾಸ, ಶಿವಕುಮಾರ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಅನೀಲ ನಾಗನಳ್ಳಿ, ದತ್ತಾತ್ರಿ ನಿರಂಜೆ, ಚಿರಂಜೀವಿ ಟೆಂಗಳಿ, ಸುನೀಲ ಕುಂಬಾರ ಎಂಬುವವರನ್ನು ಬಂಧಿಸಿ 3,730 ರೂ.ನಗದು ಜಪ್ತಿ ಮಾಡಿದ್ದಾರೆ. ಸಿದ್ದು ಮುಲಗೆ ಮತ್ತು ಲಕ್ಷ್ಮೀಕಾಂತ ಉಪಳಾಂವ ಎಂಬುವವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.