Home ಜಿಲ್ಲೆ ಪಾದಯಾತ್ರೆ ವೇಳೆ ನಿಧನರಾದ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ರೆಡ್ಡಿ ಸಾಂತ್ವಾನ

ಪಾದಯಾತ್ರೆ ವೇಳೆ ನಿಧನರಾದ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ರೆಡ್ಡಿ ಸಾಂತ್ವಾನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ.12: ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅಕಾಲಿಕವಾಗಿ ಸಾವನ್ನಪ್ಪಿದ ತಾಲೂಕಿನ ಶಂಕರ ಬಂಡೆ ಗ್ರಾಮದ ಕಾರ್ಯಕರ್ತ ಎಸ್.ಬಿ.ತಿಮ್ಮಪ್ಪ ಅವರ ನಿವಾಸಕ್ಕೆ ಪಕ್ಷದ ನಾಯಕ, ಗಂಗಾವತಿ ಶಾಸಕ ಜಿ.ಜನಾರ್ಧನರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾ ಅವರೊಂದಿಗೆ ನಿನ್ನೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಅರ್ಥಿಕ ನೆರವನ್ನು ಕಲ್ಪಿಸಿದ್ದಾರೆ.

ಈ ವೇಳೆ ಜನಾರ್ದನರೆಡ್ಡಿ ಅವರು

ತಿಮ್ಮಪ್ಪ ಅವರು ಅಕಾಲಿಕವಾಗಿ ನಿಧನದ ಸುದ್ದಿ ತಿಳಿದುಮನಸ್ಸಿಗೆ ಅತೀವ ದುಃಖವಾಗಿದೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ನೀಡಲಿ ಎಂದಿದ್ದಾರೆ.

ಈ ವೇಳೆ ಮುಖಂಡರಾದ, ಅನಿಲ್ ನಾಯ್ಡು,  ಓಬಳೇಶ್,  ಮಲ್ಲಿಕಾರ್ಜುನಗೌಡ,  ಹೇಮಂತ್ ಮಹೇಶ್  ಇನ್ನಿತರರು ಇದ್ದರು.