
ಹುಬ್ಬಳ್ಳಿ,ಸೆ.೧೨: ಸತ್ಯಧರ್ಮತೀರ್ಥರ ಆರಾಧನಾ ಹಾಗೂ ಜಮಖಂಡಿ ವಾದಿರಾಜಾಚಾರ್ಯರ ಆರಾಧನಾ ಪ್ರಯುಕ್ತ ಹುಬ್ಬಳ್ಳಿ ಎಮ್ ಜೆ ನಗರದ ಶಕ್ತಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ದಲ್ಲಿ ಶ್ರೇಷ್ಠ ಸಂಗೀತ ಮನೆತನದ ವಿಧ್ವಾನ್ ಜಗನ್ನಾಥ ಸಾ ಕಬಾಡಿ ಇವರ ವಾಯಿಲಿನ ವಾದನ ಏರ್ಪಡಿಸಲಾಗಿತ್ತು. ಹಂಸಧ್ವನಿ ರಾಗದಲ್ಲಿ ವಿಶೇಷ ಚಿಜಗಳನ್ನು ವಾಯಿಲಿನಲ್ಲಿ ನುಡಿಸಿ ನಂತರ ದಾಸರ ಪದಗಳನ್ನು, ಹಿಂದಿ ಭಜನೆ ಗಳನ್ನು ವಾಯಿಲಿನ ವಾದನದಲ್ಲಿ ನುಡಿಸಿ ಸಂಗೀತ ರಸಿಕರ ಮನವನ್ನು ತಣಿಸಿದರೆ, ವಾಯಿಲಿನ ವಾದನ ಕ್ಕೆ ಸಮರ್ಥ ವಾಗಿ ಆಡಿ. ಮನುಕುಮಾರ ಹಿರೇಮಠ ತಬಲಾ ನುಡಿಸಿ ಭೇಷ ಎನಿಸಿ ಕೊಂಡರು.
\ ಪ್ರಾರಂಭದಲ್ಲಿ ಹರಿದಾಸ ಚಿಂತಕರಾದ ವಿಷ್ಣುತೀರ್ಥ ಕಲ್ಲೂರಕರ ಪ್ರಾಸ್ಥಾವಿಕ ವಾಗಿ ಮಾತಾಡಿ ಕಲಾವಿದರನ್ನು ಮತ್ತು ಅತಿಥಿಗಳನ್ನು ಪರಿಚಯಿಸಿ ತಂತಿ ವಾದ್ಯ ವಾಯಿಲಿನ ವಾದನದ ಬಗ್ಗೆ ಮಾತಾಡಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಸಿದರು. ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಂಡಿತ ಬಾಲಚಂದ್ರ ನಾಕೋಡ,ವಿಧ್ವಾನ್ ತುಳಸಿ ಸಾ ಕಬಾಡಿ, ವಿಜಯಕುಮಾರ, ಆನಂದ ಪಾಟೀಲ, ಯುವ ಸಾಹಿತಿ ಆರತಿರಾವ್, ಶಶಿಕಲಾ ಪಾಟೀಲ,ರಾಘವೇಂದ್ರ ನಾಕೋಡ,ಹೇಮಾ ಬಂಡಿಹಾಳ ಭಾಗವಹಿಸಿದ್ದರು.































