Home ಜಿಲ್ಲೆ ಕಲಬುರಗಿ ಶ್ರಾವಣ ಮಾಸದ ಮುಕ್ತಾಯ: ಕನ್ನಡ ನಾಡು ರಕ್ಷಣಾ ಪಡೆಯಿಂದ ಮಹಾ ಪ್ರಸಾದ ವಿತರಣೆ

ಶ್ರಾವಣ ಮಾಸದ ಮುಕ್ತಾಯ: ಕನ್ನಡ ನಾಡು ರಕ್ಷಣಾ ಪಡೆಯಿಂದ ಮಹಾ ಪ್ರಸಾದ ವಿತರಣೆ

ಕಲಬುರಗಿ: ಶ್ರಾವಣ ಮಾಸದ ಮುಕ್ತಾಯದ ಪ್ರಯುಕ್ತ ಕನ್ನಡ ನಾಡು ರಕ್ಷಣಾ ಪಡೆ, ಕಲಬುರಗಿ ವತಿಯಿಂದ ರಾಮ ಮಂದಿರ ಸರ್ಕಲ್‍ನಲ್ಲಿ ಮಹಾ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಪಡೆಯ ರಾಜ್ಯ ಉಪಾಧ್ಯಕ್ಷ ಗಜಾನಂದ ದೇಶಪಾಂಡೆ ಅವರ ಸಹಯೋಗದಲ್ಲಿ ಸಾರ್ವಜನಿಕರಿಗೆ ಮಹಾ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗಜಾನಂದ ದೇಶಪಾಂಡೆ, ಶ್ರಾವಣ ಮಾಸದ ಧಾರ್ಮಿಕ ಆಚರಣೆಗಳ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಮೂಲಕ ಸೌಹಾರ್ದತೆ ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ನಾಡು ರಕ್ಷಣಾ ಪಡೆಯ ಜಿಲ್ಲಾ ಅಧ್ಯಕ್ಷ ವಿನೋದ ಎಂ. ಪಾಟೀಲ, ಸಚಿನ್, ನಿತಿನ್, ಲಕ್ಷ್ಮಿಕಾಂತ್, ರಮೇಶ್, ಪವನ್ ಉದನೂರು, ಗುರುರಾಜ್ ಕೊರಳಿ, ಶೇಖರ್, ಕಾರ್ತಿಕ್, ಶಶಿ ವಗೆ, ಶರಣು, ಅಖಿಲ್, ಮೊಬಿನ್, ದೀಪಕ್, ಶರಣು, ಎಸ್.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.