Home ಜಿಲ್ಲೆ ಕ್ಯಾತನಾಳ: ನಾಗಲಿಂಗೇಶ್ವರ ಮಂದಿರದಲ್ಲಿ ಶ್ರಾವಣ ಮಾಸ ಸಂಪನ್ನ

ಕ್ಯಾತನಾಳ: ನಾಗಲಿಂಗೇಶ್ವರ ಮಂದಿರದಲ್ಲಿ ಶ್ರಾವಣ ಮಾಸ ಸಂಪನ್ನ

ಸೈದಾಪುರ:ಸಮೀಪದ ಕ್ಯಾತನಾಳ ಗ್ರಾಮದ ಇಂದಿರಾನಗರದಲ್ಲಿರುವ ಶ್ರೀ ನಾಗಲಿಂಗೇಶ್ವರ ಮಂದಿರದಲ್ಲಿ ಶುಕ್ರವಾರ ಶ್ರಾವಣ ಮಾಸದ ಪೂಜಾ ಮಹೋತ್ಸವ ವಿಜೃಂಭಣೆಯಿAದ ನೆರವೇರಿತು.
ಬೆಳಗ್ಗೆಯಿಂದಲೇ ಭಕ್ತರು ಭಕ್ತಿ ಭಾವದೊಂದಿಗೆ ದೇವಸ್ಥಾನವನ್ನು ಸ್ವಚ್ಛಗೊಳಿಸಿ, ದೇವಸ್ಥಾನದಲ್ಲಿ ಪ್ರತಿಷ್ಠಾನಗೊಳಿಸಿದ ಶಿವಲಿಂಗ, ನಾಗಲಿಂಗೇಶ್ವರ ಮೂರ್ತಿಗಳನ್ನು ಹೂ, ತೆಂಗಿನ ಗರಿಗಳಿಂದ ಅಲಂಕಾರಗಳಿಸಿದರು. ನಂತರ ಶಿವಲಿಂಗ ಪೂಜೆ ಹಾಗೂ ವಿವಿಧ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ನಂತರ ನಾಡಿನ ಕ್ಷೇಮಕ್ಕಾಗಿ ನಾಗಲಿಂಗೇಶ್ವರನಿಗೆ ವಿಶೇಷ ಅಭಿಷೇಕ, ಮಹಾಪೂಜೆ ಮತ್ತು ಮಹಾಮಂಗಳಾರತಿ ಭಕ್ತರ ಸಮ್ಮುಖದಲ್ಲಿ ನೆರವೇರಿತು. ನಂತರ ಹುಗ್ಗಿ, ಅನ್ನ, ಸಾರು ಸೇರಿದಂತೆ ಹಲವು ವಿಧದ ಖಾದ್ಯಗಳನ್ನು ಭಕ್ತರಿಗೆ ಅನ್ನಸಂತರ್ಪಣೆ ಮಾಡಿ, ಶ್ರಾವಣ ಮಾಸವನ್ನು ಸಂಪನ್ನಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕ ಬೂದಯ್ಯ ಸ್ವಾಮಿ ಕ್ಯಾತನಾಳ, ಬಾಬು ನಾಯಕ, ಹಣಮಂತರಾಯ (ರೆಡ್ಡಿ) ನಾಯಕ, ಭಾಗಪ್ಪ ಕೋರೆ, ಚೆನ್ನಮಲ್ಲಪ್ಪ ಚೇಗುಂಟಿ, ಗೋಪಾಲ ಇಂದಿರಾನಗರ, ಬಸವಲಿಂಗಪ್ಪ ವಡಗೇರಕರ್, ಲಕ್ಷ್ಮಣ ಬಾಗ್ಲಿ, ಸತೀಶ, ಮಲ್ಲು, ಮರೆಪ್ಪ ಕಟ್ಟಿಮನಿ, ಸಿದ್ಧಾರ್ಥ, ಮಹಾದೇವ ಹಾಗೂ ಗ್ರಾಮದ ಹಿರಿಯರು, ಯುವಕರು , ಮಕ್ಕಳು, ಮಹಿಳೆಯರು ಸೇರಿದಂತೆ ಇತರರಿದ್ದರು.