Home ಜಿಲ್ಲೆ ಶಿಕ್ಷಕ ತ್ರಿಮೂರ್ತಿ ಸ್ವರೂಪಿಯಾಗಿದ್ದಾನೆ:ರಾಠೋಡ

ಶಿಕ್ಷಕ ತ್ರಿಮೂರ್ತಿ ಸ್ವರೂಪಿಯಾಗಿದ್ದಾನೆ:ರಾಠೋಡ

ಸೈದಾಪುರ:ವಿದ್ಯಾರ್ಥಿಯ ಯೋಗಕ್ಷೇಮಕ್ಕಾಗಿ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯದಲ್ಲಿ ಸದಾ ನಿರತನಾದ ಶಿಕ್ಷಕನು ತ್ರೀಮೂರ್ತಿ ಸ್ವರೂಪಿಯಾಗಿದ್ದಾನೆ ಎಂದು ಶ್ರೀ ಬಾಲಾಜಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕಿಶನ ರಾಠೋಡ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಬಾಲಾಜಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಕರು. ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಶಿಸ್ತು, ಸಮಯ ಪಾಲನೆ ಜೊತೆಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಜೀವನದಲ್ಲಿ ಪರಿವರ್ತನೆಯನ್ನು ತರುತ್ತಾರೆ ಎಂದು ಹೇಳಿದರು.
ಮುಖ್ಯಗುರು ಚಾಂದ ಪಟೇಲ್ ಮಾತನಾಡಿ, ಶಿಕ್ಷಕರು ಶಿಕ್ಷಣದ ಆಸ್ತಿಯಾಗಿದ್ದಾರೆ. ಕೃಷಿಕ, ವ್ಯಾಪಾರಿ, ಉದ್ಯಮಿ, ರಾಜಕಾರಣಿ ಅಥವಾ ಉನ್ನತ ಹುದ್ದೆ ಅಲಂಕರಿಸಿದ ಪ್ರತಿ ವ್ಯಕ್ತಿಯೂ ತಾನು ಈ ಸ್ಥಾನ ತಲುಪಲು ಶಿಕ್ಷಕರು ನೀಡಿದ ಶಿಕ್ಷಣ, ನಿಸ್ವಾರ್ಥ ಬೆಂಬಲ ಕಾರಣವಾಗಿದೆಂಬುದನ್ನು ನೆನಪಿಟ್ಟುಕೊಂಡು ಶಿಕ್ಷಕರನ್ನು ಸದಾ ಗೌರವಿಸಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಶ್ವೇತಾ, ಮಂಜುನಾಥ, ಮಿನಾಕ್ಷಿ, ಹೊನ್ನಪ್ಪ, ಶಿಕ್ಷಕರಾದ ಶಬರೀಶ ಭಜಂತ್ರಿ ರವಿಂದ್ರರೆಡ್ಡಿ, ಶ್ವೇತಾ, ಲಕ್ಷಿö್ಮ, ಅನ್ನಪೂರ್ಣ ಸೇರಿದಂತೆ ಇತರರಿದ್ದರು.