
ಜೇವರಗಿ,ಸೆ.3: ತಾಲೂಕಿನ ಜೈನಾಪುರ ತಾಂಡಾದಲ್ಲಿರುವ ಜಗದಂಬಾ ಹಾಗೂ ಸೇವಾಲಾಲ್ ಮಹಾರಾಜರ ದೇವಾಲಯದಲ್ಲಿ ಕಳ್ಳತನ ನಡೆದಿದೆ.
ಜೈನಾಪೂರ ತಾಂಡಾದ ಜನರೆಲ್ಲಾ ನಿದ್ರೆಯಲ್ಲಿದ್ದಾಗ ನಸುಕಿನ ಜಾವ ದೇವಾಲಯದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಗರ್ಭಗುಡಿಯಲ್ಲಿರುವ ಸೇವಾಲಾಲ್ ಮಹಾರಾಜರಬೆಳ್ಳಿ ವಿಗ್ರಹ ಕಳ್ಳತನ ಮಾಡಿದ್ದಾರೆ.
ಪವಿತ್ರ ಶ್ರಾವಣ ಮಾಸದ ದಿನಗಳಲ್ಲೇ ನಡೆದ ದುಷ್ಕರ್ಮಿಗಳ ಪಾತಕ ಕೃತ್ಯದಿಂದ ರೋಸಿಹೋದ
ತಾಂಡಾದ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
































