
ಪೋಲವರಂ, ಸೆ. ೨-ಆಂಧ್ರಪ್ರದೇಶದ ಪೋಲವರಂ ಜಿಲ್ಲೆಯ ಗೊಲ್ಲಗುಪ್ಪ ಗ್ರಾಮದಲ್ಲಿ ಸರ್ಕಾರಿ ಆರೋಗ್ಯ ಇಲಾಖೆ ವತಿಯಿಂದ ವಿತರಿಸಲಾದ ಮಲೇರಿಯಾ ನಿಗ್ರಹ ಮಾತ್ರೆಗಳನ್ನು (ಕ್ಲೋರೋಕ್ವಿನ್) ಸೇವಿಸಿದ ನಂತರ ಏಳು ವರ್ಷದ ಶಾಲಾ ಬಾಲಕಿ ಸಾವನ್ನಪ್ಪಿದ್ದು, ೫೨ಕ್ಕೂ ಹೆಚ್ಚು ಗ್ರಾಮಸ್ಥರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಮೃತ ಬಾಲಕಿಯನ್ನು ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಾಡವಿ ಜಮುನಾ (೭) ಎಂದು ಗುರುತಿಸಲಾಗಿದೆ. ಘಟನೆಯ ವಿವರ:ತೆಲಂಗಾಣ ಗಡಿಭಾಗದಲ್ಲಿರುವ ಗೊಲ್ಲಗುಪ್ಪ ಗ್ರಾಮದಲ್ಲಿ ಮಲೇರಿಯಾ ತಡೆಗಟ್ಟುವಿಕೆ ಕಾರ್ಯಕ್ರಮದ ಭಾಗವಾಗಿ ಸುಮಾರು ೭೧ ಜನರಿಗೆ ಕ್ಲೋರೋಕ್ವಿನ್ ಮಾತ್ರೆಗಳನ್ನು ವಿತರಿಸಲಾಗಿತ್ತು.
ಮಾತ್ರೆ ಸೇವಿಸಿದ ಕೆಲವೇ ಗಂಟೆಗಳಲ್ಲಿ ಅನೇಕರಿಗೆ ವಾಂತಿ, ತಲೆಸುತ್ತು ಹಾಗೂ ದೈಹಿಕ ಅಸ್ವಸ್ಥತೆ ಕಾಣಿಸಿಕೊಂಡಿದೆ.ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ೨೯ ರೋಗಿಗಳನ್ನು ನೆರೆಯ ತೆಲಂಗಾಣದ ಆಸ್ಪತ್ರೆಗೆ ಹಾಗೂ ೨೪ ಜನರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಜಮುನಾ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.ಹೆಚ್ಚುವರಿ ಮುಖ್ಯಾಂಶಗಳು ಹಾಗೂ ಪ್ರಸ್ತುತ ಪರಿಸ್ಥಿತಿ ಆರೋಗ್ಯ ಇಲಾಖೆಯ ತ್ವರಿತ ಕ್ರಮ: ಘಟನೆ ತಿಳಿಯುತ್ತಿದ್ದಂತೆ ಕಾಕಿನಾಡ ಸರ್ಕಾರಿ ಸಾಮಾನ್ಯ ಆಸ್ಪತ್ರೆಯಿಂದ ೯ ಸದಸ್ಯರ ತಜ್ಞ ವೈದ್ಯರ ತಂಡ ಗ್ರಾಮಕ್ಕೆ ಧಾವಿಸಿದೆ.
ಅಲ್ಲದೆ ವಿಜಯವಾಡ ಮತ್ತು ರಾಜಮಹೇಂದ್ರವರಂನಿಂದ ಹೆಚ್ಚುವರಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.ಆತಂಕ ಪಡಬೇಡಿ – ಕಲೆಕ್ಟರ್ ಭರವಸೆ: “ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ೫೨ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಭೀತಿಗೆ ಒಳಗಾಗುವ ಅಗತ್ಯವಿಲ್ಲ,” ಎಂದು ಜಿಲ್ಲಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶ: ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಅಸ್ವಸ್ಥಗೊಂಡವರಿಗೆ ಉನ್ನತ ಮಟ್ಟದ ಉಚಿತ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. ಜೊತೆಗೆ, ಘಟನೆಗೆ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ವಿಷಕಾರಿ ಪ್ರಮಾಣವೇ ಕಾರಣವೇ ಮಲೇರಿಯಾ ಪಾರಸೈಟ್‌ಗಳನ್ನು ಕೊಲ್ಲಲು ಬಳಸಲಾಗುವ ಕ್ಲೋರೋಕ್ವಿನ್ ಮಾತ್ರೆಗಳ ಡೋಸೇಜ್ ವ್ಯತ್ಯಾಸವಾಯಿತೇ ಅಥವಾ ಕಳಪೆ ಗುಣಮಟ್ಟದ ಮಾತ್ರೆಗಳನ್ನು ವಿತರಿಸಲಾಯಿತೇ ಎಂಬ ಕೋನದಲ್ಲಿ ವೈದ್ಯಕೀಯ ತಂಡ ತನಿಖೆ ನಡೆಸುತ್ತಿದೆ.
ಕ್ಲೋರೋಕ್ವಿನ್ ಎಂಬುದು ಮಲೇರಿಯಾ ರೋಗದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ದಶಕಗಳಿಂದ ಬಳಸಲಾಗುತ್ತಿರುವ ಪ್ರಮುಖ ‘ಆಂಟಿ-ಪ್ಯಾರಸೈಟಿಕ್’ (ಪರಾವಲಂಬಿ ನಿಗ್ರಹ) ಔಷಧಿಯಾಗಿದೆ ಆದರೆ ಇದನ್ನು ಇದನ್ನು ರ್ಯುಮಟಾಯ್ಡ್ ಆರ್ಥರೈಟಿಸ್ ಮತ್ತು ಲೂಪಸ್ ನಂತಹ ಕಾಯಿಲೆಗಳಿಗೂ ವೈದ್ಯರ ಸಲಹೆಯಂತೆ ನೀಡಲಾಗುತ್ತದೆ.ಇದು ರಕ್ತದಲ್ಲಿನ ಪ್ಲಾಸ್ಮೋಡಿಯಂ ಮಲೇರಿಯಾ ಕ್ರಿಮಿಗಳನ್ನು ನಾಶಪಡಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಸಾಮಾನ್ಯ ಪ್ರಮಾಣದಲ್ಲಿ ಸೇವಿಸಿದಾಗ ಕೆಲವರಲ್ಲಿ ಈ ಕೆಳಗಿನ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳಬಹುದು , ಜೀರ್ಣಾಂಗ ವ್ಯವಸ್ಥೆ: ವಾಕರಿಕೆ, ವಾಂತಿ, ಹೊಟ್ಟೆನೋವು ಮತ್ತು ಅತಿಸಾರ.ನರಮಂಡಲ ತಲೆಸುತ್ತು, ತಲೆನೋವು ಮತ್ತು ಜಡತ್ವ. ಚರ್ಮದ ಮೇಲೆ ಕೆರೆತ ( ಅಥವಾ ದದ್ದುಗಳು ಉಂಟಾಗಲಿದೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖವಿದೆ.

































