
ಕಲಬುರಗಿ: ನಗರದ ಕರುಣೇಶ್ವರ ಬಡಾವಣೆಯ ನಿವಾಸಿ ಬಲರಾಮ ರಾಣಪ್ಪ ಕುಟುಂಬದವರಿಗೆ ಹಣ ನೀಡುವಂತೆ ಜೀವಬೆದರಿಕೆ ಹಾಕಿ,ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಇಂದು ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ರವಿಚಂದ್ರ ಗುತ್ತೇದಾರ,ಲಕ್ಷ್ಮೀಕಾಂತ ಸ್ವಾದಿ,ಶೀಲಾ, ಮಾಲಾಶ್ರೀ,ಕೃಷ್ಣಾ ಧೋತ್ರೆ,ರಾಜು ಬೇಲೂರು,ಮಹೇಶ ಕೆಂಭಾವಿ ,ಜಗದೇವಿ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡರು.






























