Home ಜಿಲ್ಲೆ ಯಾದಗಿರ ಜಿಲ್ಲಾ ಮಜ್ಲಿಸ್ ಖುದ್ದಮುಲ್ ಅಹ್ಮದಿಯಾ ಮತ್ತು ಅತ್ಫಾಲುಲ್ ಅಹ್ಮದಿಯಾ ವಾರ್ಷಿಕ ಸಮಾವೇಶ ಯಶಸ್ವಿ

ಯಾದಗಿರ ಜಿಲ್ಲಾ ಮಜ್ಲಿಸ್ ಖುದ್ದಮುಲ್ ಅಹ್ಮದಿಯಾ ಮತ್ತು ಅತ್ಫಾಲುಲ್ ಅಹ್ಮದಿಯಾ ವಾರ್ಷಿಕ ಸಮಾವೇಶ ಯಶಸ್ವಿ

ಯಾದಗಿರ: ಕಳೆದ ಶನಿವಾರ ಬೆಳಗಿನ ಜಾವ ತಹಜ್ಜುದ್ ಮತ್ತು ಫಜರ ನಮಾಜ್ ದೊಂದಿಗೆ ಪ್ರಾರಂಭವಾದ ಈ ಸಮಾವೇಶ ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಘಟನೆ ದಕ್ಷಿಣ ಭಾರತÀ ನಾಯಬ್ ಸದರ್ ಸಾಹೇಬರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು ಮತ್ತು ಅವರು, ಅಹ್ಮದಿಯಾ ಸಮಾಜದ 5ನೇ ಖಲಿಫರ ಪಾವನ ಸಂದೇಶ ಮತ್ತು ಯಾದಗಿರ್ ಜಿಲ್ಲೆಯ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ನಂತರ ಮಗ್ರಿಬ್ ನಮಾಜ್ ವರೆಗೆ ಪವಿತ್ರ ಕುರ್ ಆಬ್ ಪಠಣ, ನಜಂ ಭಕ್ತಿಗಿತೆಗಳು, ಲಘು ಆಶು ಭಾಷಣ, ಸಂವಾದ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಸಂಜೆ ಸ್ಥಳೀಯ ಅಮೀರ್ ಸಾಹೇಬರ ಅಧ್ಯಕ್ಷತೆಯಲ್ಲಿ ಜರುಗಿದ ಸಾರ್ವಜನಿಕ ಸಮಾವೇಶದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಮುರಬ್ಬಿ ದಾವತೇ ಇಲಲ್ಲಾಹ್ ಹಾಫಿಜ್ ರಫೀಕುಜ್ಜಮಾ ಸಾಹೇಬರು ಕನ್ನಡ ಭಾಷೆಯಲ್ಲಿ ಜಮಾಅತ್ ಪರಿಚಯ ಮಾಡಿಕೊಟ್ಟರು. ನಮ್ಮ ಯಾದಗಿರ್‍ನ ಇಬ್ಬರು ವಿಶೇಷ ಅತಿಥಿಗಳನ್ನು ಹೂಮಾಲೆ ಹಾಕಿ ಸ್ವಾಗತಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ಆಯ್ಕೆಯಾದ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ದುವಾದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಮರುದಿನ ಭಾನುವಾರ ಪುನಃ ತಹಜ್ಜುದ್ ನಮಾಜ್‍ನೊಂದಿಗೆ ಎರಡನೇ ದಿನವೂ ಪ್ರಾರಂಭವಾಯಿತು. ಫಜರ್ ನಮಾಜ್ ನಂತರ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಅಲ್‍ಹಮ್ದುಲಿಲ್ಲಾಹ್, ಓಟದ ಸ್ಪರ್ಧೆ, ಹಗ್ಗಜಗ್ಗಾಟ, ಕಬಡ್ಡಿ ಮತ್ತು ಇತರ ಆಟಗಳನ್ನು ನಡೆಸಲಾಯಿತು.
ಮಗ್ರಿಬ್ ಮತ್ತು ಇಶಾ ನಮಾಜ್ ನಂತರ ಮುಕ್ತಾಯದ ಅಧಿವೇಶನವನ್ನು ಆಯೋಜಿಸಲಾಯಿತು. ಅದರಲ್ಲಿ ಜಿಲ್ಲಾ ಕಾಯಿದ್ ಅವರು ಅಹದ್ ಅನ್ನು ಪುನರುಚ್ಚರಿಸಿದರು. ಈ ಕಾರ್ಯಕ್ರಮದಲ್ಲಿ ತಕ್ವಾ ಮತ್ತು ಖಿಲಾಫತ್ ವಿಷಯದ ಬಗ್ಗೆ ಭಾಷಣವೂ ನಡೆಯಿತು. ಯಾದಗಿರ್ ಜಿಲ್ಲಾ ಕಾಯಿದ್ ಮುಕರರ್ಂ ಹಾದಿ ಸಾಹೇಬರು ಎಲ್ಲರಿಗೂ ಧನ್ಯವಾದ ಹೇಳಿದರು. ಕ್ರೀಡೆಗಳಲ್ಲಿ ಸ್ಥಾನ ಪಡೆದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೊನೆಯಲ್ಲಿ ಸಾಮುಹಿಕ ಮೌನ ಪ್ರಾರ್ಥನೆ ದುವಾದೊಂದಿಗೆ ಸಮಾವೇಶ ಮುಕ್ತಾಯಗುಂಡಿತು.