
೪,೫೦೦ ಮಂದಿ ನಾಪತ್ತೆ
ಕಠ್ಮಂಡು.ಸೆ.೨-ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತದ ದುರಂತ ಸಂಭವಿಸಿ ಒಂದು ವಾರ ಕಳೆದರೂ ಪರಿಸ್ಥಿತಿ ಗಂಭೀರವಾಗಿಯೇ ಉಳಿದಿದೆ. ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಸಂಖ್ಯೆ ಬುಧವಾರದ ವೇಳೆಗೆ ೧,೧೨೭ಕ್ಕೆ ಏರಿಕೆಯಾಗಿದ್ದು, ೪,೮೦೦ಕ್ಕೂ ಹೆಚ್ಚು ಜನ ಇನ್ನೂ ಪತ್ತೆಯಾಗಿಲ್ಲ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ಪತ್ತೆಗಾಗಿ ವೆಬ್ಸೈಟ್ನಲ್ಲಿ ೯೧೧ ಗುರುತು ಸಿಗದ ಮೃತದೇಹಗಳ ಮಾಹಿತಿ ಪ್ರಕಟದುರಂತದಲ್ಲಿ ಕಾಣೆಯಾದ ತಮ್ಮ ಸಂಬಂಧಿಕರನ್ನು ಮತ್ತು ಆಪ್ತರನ್ನು ಹುಡುಕಲು ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ನೇಪಾಳ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ.
ಗುರುತಿಸಲಾಗದ ಸ್ಥಿತಿಯಲ್ಲಿ ಪತ್ತೆಯಾಗಿರುವ ೯೧೧ ಮೃತದೇಹಗಳ ಸಂಪೂರ್ಣ ವಿವರಗಳು, ಗುರುತಿನ ಕುರುಹುಗಳು ಮತ್ತು ಛಾಯಾಚಿತ್ರಗಳನ್ನು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದಾರೆ.ಸಂಬಂಧಿಕರು ಈ ವೆಬ್ಸೈಟ್ಗೆ ಭೇಟಿ ನೀಡಿ ಮೃತರ ದೇಹಗಳನ್ನು ಗುರುತಿಸಿ, ಹಸ್ತಾಂತರಿಸಿಕೊಳ್ಳಲು ಮನವಿ ಮಾಡಲಾಗಿದೆ.
ರಕ್ಷಣಾ ಕಾರ್ಯ ಚುರುಕು
೪,೮೦೦ಕ್ಕೂ ಹೆಚ್ಚು ಜನರ ಸುಳಿವು ಇನ್ನೂ ಸಿಕ್ಕಿಲ್ಲ; ಕಾರ್ಯಾಚರಣೆಯಲ್ಲಿ ಸೇನೆ ಹಾಗೂ ರಕ್ಷಣಾ ಪಡೆಗಳ ಭಾಗಿ.ಪೊಲೀಸ್ ಇಲಾಖೆ ಕ್ರಮ: ೯೧೧ ಗುರುತಿಸಲಾಗದ ಮೃತದೇಹಗಳ ಮಾಹಿತಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಇದುವರೆಗೆ ೬,೫೦೦ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನೇನೇಪಾಳದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ಈ ಪ್ರವಾಹದಿಂದಾಗಿ ಸಾವಿರಾರು ಕುಟುಂಬಗಳು ವಸತಿರಹಿತವಾಗಿದ್ದು, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

































