
ಮಾಲೂರು.ಸೆ೧:ನಗರದ ಧರ್ಮರಾಯ ಸ್ವಾಮಿ ದೇವಾಲಯ ದ ಆವರಣದಲ್ಲಿ ವಹಿನಿ ಕುಲ ಕ್ಷತ್ರಿಯ ಸಂಘ ವಹಿನಿ ಯುವ ಜಾಗೃತಿ ಸಂಘ ಸಂಯುಕ್ತ ಆಶ್ರಯದಲ್ಲಿ ೧೮ನೇ ವರ್ಷದ ದ್ರೌಪದಿ ಜಯಂತಿ ಮಹೋತ್ಸವ ಅಂಗವಾಗಿ ದ್ರೌಪದಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಾಜ ಭಟ್ಟರಾದ ಮೋಹನ್ ಭಟ್ಟರ ಅರ್ಚಕತ್ವದಲ್ಲಿ ವಿವಿಧ ರೀತಿಯ ಪೂಜಾ ಕೈಕಂರ್ಯ ಗಳನ್ನು ನಡೆಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ದ್ರೌಪದಂಬ ಜಯಂತಿಯ ಪ್ರಯುಕ್ತ ನಗರದ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ವೈನಿಕುಲ ಕ್ಷತ್ರಿಯ ಸಂಘ ಹಾಗೂ ವೈನಿ ಯುವ ಜಾಗೃತ ಸಂಘ ವತಿಯಿಂದ ಬೆಳಗಿನ ಜಾವ ದ್ರೌಪದಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ರೀತಿಯ ಪೂಜೆಗಳನ್ನು ನಡೆಸಲಾಯಿತು ಇದೇ ಸಂದರ್ಭದಲ್ಲಿ ಸುಮಂಗಲಿಯರು ಮನೆಗಳಿಂದ ತುಂಬಿಟ್ಟು ದೀಪಗಳನ್ನು ತಂದು ದ್ರೌಪದಿ ದೇವಿಗೆ ದೀಪಗಳನ್ನು ಬೆಳಗಲು ಆಗಮಿಸಿದ ಸುಮಂಗಲಿಯರಿಗೆ ಹಾಗೂ ಮಹಿಳೆಯರಿಗೆ ಅರಿಶಿನ ಕುಂಕುಮ ಮತ್ತು ಮಂಗಳ ದರ್ಬೆಗಳನ್ನು ನೀಡಲಾಯಿತು ತಾಲೂಕಿನ ಗುಡಿ ಕಟ್ಟಿನ ಗ್ರಾಮಗಳಿಂದ ಆಗಮಿಸಿದ ಮಹಿಳಾ ಭಕ್ತಾದಿಗಳು ದೇವಿಗೆ ಆರತಿ ದೀಪೋತ್ಸವ ಮಾಡಿದರು.
ಭಕ್ತಾದಿಗಳು ಆಗಮಿಸಿ ದೀವಿಗೆ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು ಸಂಜೆ ಮೂನ್ ಸ್ಟಾರ್ ಇವೆಂಟ್ಸ್ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು ಪ್ರಸಕ್ತ ವರ್ಷ ಕರಗ ಹೊತ್ತ ಕರಗ ಪೂಜಾರಿ ವೆಂಕಟರೋಣಪ್ಪನವರಿಗೆ ಸನ್ಮಾನ ಸಹ ಏರ್ಪಡಿಸಲಾಗಿದೆ ಬುದುವಾರ ಮಾಲೂರಿನ ರಾಜಭೀದಿಗಳಲ್ಲಿ ವಿವಿಧ ವೇಷ ಭೂಷಣಗಳು ಜಾನಪದ ಕಲಾತಂಡಗಳ ನಾದಸ್ವರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದ್ರೌಪದಿ ದೇವಿಯನ್ನು ಪುಷ್ಪಾಲಂಕೃತ ರಥದಲ್ಲಿಟ್ಟು ಅದ್ದೂರಿಯಾಗಿ ಮೆರವಣಿಗೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಕೆ ವೈ ನಂಜೇಗೌಡ ಜೆಡಿಎಸ್ ಮುಖಂಡ ಹೂಡಿ ವಿಜಯಕುಮಾರ್ ಧರ್ಮರಾಯಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಎಂಪಿ ವಿಜಯ್ ಕುಮಾರ್ ಖಜಾಂಚಿ ಪಿ ವೆಂಕಟೇಶ್ ದೇವಾಲಯ ಸಮಿತಿಯ ಪೆರುಮಾಳಪ್ಪ ಎಂ ವಿ ನಾರಾಯಣಸ್ವಾಮಿ ವೆಂಕಟೇಶ್ ಎಂ ಸಿ ರವಿ ಶ್ರೀನಿವಾಸ್ ಮುನಿಸ್ವಾಮಿ ಸತೀಶ್ ರಾಮಣ್ಣ ಆಂಜಿನಪ್ಪ ಬಾಬು ವೆಂಕಟಗಿರಿಯಪ್ಪ ಅಶೋಕ್ ರಾಮಪ್ಪ ಚೇತನ್ ಆರ್ ಪಾಪಣ್ಣ ಎಂ ಸಿ ಮುನಿರಾಜು ಕೆಸಿ ಸೂರಪ್ಪ ಏ ರಾಜಪ್ಪ ಅಂಜಿನಪ್ಪ ಬಡಗಿ ಶ್ರೀನಿವಾಸ್ ರಾಮಮೂರ್ತಿ ಪುನೀತ್ ಶ್ರೀನಿವಾಸ್ ಮಹೇಶ್ ಬಾಬು ಮಂಜುನಾಥ್ ಅಶೋಕ್ ವೆಂಕಟೇಶಪ್ಪ ಎಂ ಸಿ ರಘು ಮಂಜುನಾಥ್ ಸೇರಿದಂತೆ ಧರ್ಮರಾಯಸ್ವಾಮಿ ದೇವಾಲಯ ಸಮಿತಿ ಸದಸ್ಯರು ವೈನಿ ಯುವ ಜಾಗೃತಿ ಸಂಘದ ಅಧ್ಯಕ್ಷರು ಸದಸ್ಯರು ಪಾಲ್ಗೊಂಡಿದ್ದರು.
































