
ಮಾಲೂರು.ಸೆ.೧-ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಹಮ್ಮಿಕೊಂಡಿದ್ದ ಮೂರು ದಿನಗಳ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ೩೫೫ ನೇ ಆರಾಧನಾ ಮಹೋತ್ಸವವು ಇಂದು ನಡೆದ ಉತ್ತರಾಧನೆ ಮೂಲಕ ಸಂಪನ್ನಗೊಂಡಿತ್ತು.
ಬೆಳಿಗ್ಗೆ ಬೃಂದಾವನಕ್ಕೆ ಸುಪ್ರಭಾತ ಸೇವೆ ನಿರ್ಮಾಲ್ಯ ವಿಸರ್ಜನೆಯೊಂದಿಗೆ ಸುದರ್ಶ ಉತ್ತರಾಧನೆಗೆ ಚಾಲನೆ ನೀಡಲಾಯಿತು.
ಪಂಚಾಮೃತ ಅಭಿಷೇಕ ಮತ್ತು ತುಳಸಿ ಆರ್ಚನೆ ನಡೆಯಿತು. ನಂತರ ಶ್ರೀ ಗುರುರಾತರ ರಾಜಬೀದಿ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು. ಜಯ ರಾಘವೇಂದ್ರ ಮಹಿಳಾ ಭಜನೆ ಮಂಡಳಿಯವರಿಂದ ದೇವರ ನಾಮ ,ಸಂರ್ಕೀತೆಗಳು ನಡೆದವು. ನಂರತ ಬೃಂದಾವನಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು.
ಸಂಜೆ ಚಿಂತಲಪಲ್ಲಿ ವಿದ್ವಾನ್ ಶ್ರೀನಿವಾಸ್ ಅವರಿಂದ ದಾಸರ ಪದಗಳು ದೇವರ ನಾಮಗಳ ರ್ಕೀತನೆ ನಡೆಯಿತು. ಪ್ರಾಕಾರೋತ್ಸವ ,ತೊಟ್ಟಿಲ ಸೇವೆ ನಂತರ ಮಹಾಮಂಗಳಾರತಿ ಯೊಂದಿಗೆ ಮೂರು ದಿನಗಳ ಶ್ರೀರಾಯರ ಆರಾಧನೆಯನ್ನು ಸಂಪನ್ನಗೊಳಿಸಲಾಯಿತು,
ಶ್ರೀ.ರಾ.ಸೇ.ಸ.ಅಧ್ಯಕ್ಷ ಜಯರಾವ್. ಹೆಚ್.ವಿ.ಸುದರ್ಶನ್, ಬದ್ರಿನಾಥ್ ,ಹೆಚ್.ಎನ್.ಚಂದ್ರು, ಹೆಚ್.ಎನ್.ರವಿ, ನಾಗಾನಂದ, ಬಿಂದುಮಾಧವ ಚಾರ್, ಕಮಲೇಶ್ ,ಶ್ರೀಧರ ಮೂರ್ತಿ, ರಮೇಶ್ ,ವಿಠಲ್ ರಾವ್. ಸಂತೋಷ್ ಶರ್ಮ, ಬಾಲಾಜಿ ಅಯ್ಯಂಗಾರ್, ರಾಘವೇಂದ್ರ ,ರಾಘವೇಂದ್ರ ವೈದ್ಯ, ಶೇಷಗಿರಿ ಆಚಾರ್, ನರಸಿಂಹ ಮೂರ್ತಿ ಇನ್ನಿತರರು ಹಾಜರಿದ್ದರು.
































